Skip to main content


ಎರಡು ಕೈ ಸೇರಿದ್ರೆ ಚಪ್ಪಾಳೆ ಆಗೋದು - ಕಾಸ್ಟಿಂಗ್ ಕೌಚ್ ಬಗ್ಗೆ ರಾಗಿಣಿ

ಇತ್ತೀಚೆಗೆ ಭಾರತದ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಹೀಗಿರುವಾಗ ನಟಿ ರಾಗಿಣಿ ದ್ವಿವೇದಿ ಕಾಸ್ಟಿಂಗ್ ಕೌಚ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕಿಚ್ಚು ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ ರಾಗಿಣಿ, ಕಾಸ್ಟಿಂಗ್ ಕೌಚ್ ನಟಿಯರ ವಿಚಾರಕ್ಕೆ ಬಿಟ್ಟಿದ್ದು ಅವರ ವಯಕ್ತಿಕ ವಿಚಾರ. ಆದರೆ ನನಗೆ ಯಾವುದೇ ಅನುಭವವಾಗಿಲ್ಲ. ಒಂದು ಕೈಯಿಂದ ಚಪ್ಪಾಳೆ ಆಗಲ್ಲ. ಎರಡು ಕೈ ಸೇರಿದರೆ ಚಪ್ಪಾಳೆ ಆಗೊದು ಎಂದು ಹೇಳಿದ್ದಾರೆ. ಆದರೆ ನಟಿಯರನ್ನು ಮಂಚಕ್ಕೆ ಕರೆಯೊದು ಕೆಟ್ಟ ಸಂಸ್ಕೃತಿ ಎಂದು ನಟಿ ರಾಗಿಣಿ ತಿಳಿಸಿದರು.          

short by NP / more at Public TV


Comments