Skip to main content


ಡಿಲಿಟ್ ಆದ ಫೋಟೊ, ವಿಡಿಯೋ ಮತ್ತೊಮ್ಮೆ ಪಡೆಯಲು ವಾಟ್ಸ್ಯಾಪ್ ನಿಂದ ಹೊಸ ಫೀಚರ್!

ನಿಮ್ಮ ಗೆಳೆಯ/ತಿ ನಿಮಗೆ ಯಾವುದಾದರೂ ಫೋಟೊ ಕಳುಹಿರುತ್ತಾನೆ/ಳೆ. ಆಕಸ್ಮಿಕವಾಗಿ ಗ್ಯಾಲರಿಯ ವಾಟ್ಸ್ಯಾಪ್ ಫೋಲ್ಡರ್ ನಿಂದ ಅದು ಡಿಲಿಟ್ ಆಗುತ್ತದೆ. ಈ ಸಂದರ್ಭ ಅದು ಡೌನ್ ಲೋಡ್ ಮಾಡಲಾಗದ ಫೈಲ್ ಆಗುತ್ತದೆ. ನೂತನ ಅಪ್ ಡೇಟ್ ಮೂಲಕ ಡಿಲಿಟ್ ಆದ ಫೋಟೊವನ್ನು ಸರ್ವರ್ ನಿಂದ ರಿಸ್ಟೋರ್ ಮಾಡಲು ವಾಟ್ಸ್ಯಾಪ್ ಅವಕಾಶ ಕಲ್ಪಿಸುತ್ತದೆ. ಚಾಟ್ ವಿಂಡೋನಲ್ಲಿರುವ ಫೋಟೊವನ್ನು ಬಳಕೆದಾರರು ಮತ್ತೊಮ್ಮೆ ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ರೀತಿ ಡೌನ್ ಲೋಡ್ ಮಾಡಿಕೊಳ್ಳಲು ನಾವು ವಾಟ್ಸ್ಯಾಪ್ ನಿಂದ ಆ ಸಂದೇಶವನ್ನು ಅಳಿಸಿರಬಾರದು. ಆಂಡ್ರಾಯ್ಡ್ ನ ಬೆಟಾ ಬಳಕೆದಾರರಿಗೆ ಮಾತ್ರ ಈ ಫೀಚರ್ ಬಳಕೆ ಸಾಧ್ಯವಾಗಲಿದೆ. “ಎಸ್ ಡಿ ಕಾರ್ಡ್ ನಿಂದ ನಿಮ್ಮ ಫೋಟೊಗಳು ಡಿಲಿಟ್ ಆಗಿ ಚಾಟ್ ನಲ್ಲಿ ಸಂದೇಶಗಳು ಹಾಗೇ ಇದ್ದಲ್ಲಿ ಮಾತ್ರ ಮತ್ತೊಮ್ಮೆ ಫೋಟೊ ಡೌನ್ ಲೋಡ್ ಮಾಡಿಕೊಳ್ಳಬಹುದು” ಎಂದು ವರದಿ ಹೇಳುತ್ತದೆ.

short by: Sp / Read more at NewsPoint

Comments