Skip to main content


ನಾಯಕ ಸ್ಥಾನ ತ್ಯಜಿಸಿದ ರಹಸ್ಯ ಬಹಿರಂಗಪಡಿಸಿದ ಗಂಭೀರ್

ಐ.ಪಿ.ಎಲ್. ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕನ ಸ್ಥಾನವನ್ನು ಗೌತಮ್ ಗಂಭೀರ್ ತ್ಯಜಿಸಿದ್ದು, ಶ್ರೇಯಸ್ ಅಯ್ಯರ್ ಅವರಿಗೆ ನಾಯಕನ ಸ್ಥಾನ ವಹಿಸಲಾಗಿದೆ. ಗೌತಮ್ ಗಂಭೀರ್ ನಾಯಕನ ಸ್ಥಾನ ತ್ಯಜಿಸಲು ಕೋಚ್ ರಿಕಿಪಾಂಟಿಂಗ್ ಕಾರಣ ಎನ್ನಲಾಗಿತ್ತು. ಆದರೆ, ಇದನ್ನು ಗಂಭೀರ್ ಅಲ್ಲಗಳೆದಿದ್ದಾರೆ.  ನಾಯಕತ್ವವನ್ನು ತ್ಯಜಿಸಿದ್ದು ನನ್ನ ಸ್ವಂತ ನಿರ್ಧಾರವಾಗಿದೆ. ಯಾವುದೇ ಒತ್ತಡದಿಂದ ನಾನು ನಾಯಕತ್ವವನ್ನು ತ್ಯಜಿಸಿಲ್ಲ ಎಂದು ತಿಳಿಸಿದ್ದಾರೆ. ಒಮ್ಮೆಲೆ ಗಂಭೀರ್ ನಾಯಕನ ಸ್ಥಾನದಿಂದ ದೂರವಾದ ಹಿನ್ನಲೆಯಲ್ಲಿ ಅನೇಕ ರೀತಿಯ ಚರ್ಚೆಗೆ ಗ್ರಾಸವಾಗಿತ್ತು. ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಮತ್ತು ನಾನು ವೈಯಕ್ತಿಕವಾಗಿ ಯಶಸ್ವಿಯಾಗದ ಕಾರಣಕ್ಕೆ ಇಂತಹ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ.

short by Prajwal / more at Newspoint

Comments