Skip to main content


ಕಿಚ್ಚನ ಮನೆಗೆ ಬಂದ ಹೊಸ ಅತಿಥಿ!

ವಾಹನಗಳು ಅಂದ್ರೆ ಪ್ರತಿಯೊಬ್ಬರಿಗೂ ಒಂದೊಂದು ಕೊಳ್ಳುವ ಆಸೆ ಇರುತ್ತೆ. ಅದೇ ರೀತಿ ಕಿಚ್ಚ ಸುದೀಪ್‌ಗೂ ಕಾರ್ ಮತ್ತು ಬೈಕ್ ಗಳ ಮೇಲೆ ಸಾಕಷ್ಟು ಕ್ರೇಜ್ ಇದೆ. ಈಗಾಗಲೇ ಕಿಚ್ಚನ ಬಳಿ ಸಾಕಷ್ಟು ಕಾರ್ ಗಳಿದ್ದು ಸದ್ಯ ಅವರ ಕಾರ್ ಮತ್ತು ಬೈಕ್ ಲಿಸ್ಟ್ ನಲ್ಲಿ ಹೊಸದೊಂದು ಬೈಕ್ ಸೇರಿಕೊಂಡಿದೆ. ಹೌದು, ಕಿಚ್ಚ ಬಿಎಂಡಬ್ಲ್ಯೂ ಆರ್ 1200 ಅನ್ನೋ ಹೊಸ ಬೈಕ್ ಒಂದನ್ನ ನಿನ್ನೆಯಷ್ಟೆ ತೆಗೆದುಕೊಂಡಿದ್ದಾರೆ. ಹೊಸ ಬೈಕ್ ಕೊಂಡುಕೊಂಡ ತಕ್ಷಣವೇ ಕಿಚ್ಚ ಲಾಂಗ್ ರೈಡ್ ಹೋಗಿದ್ದಾರೆ. ಅಭಿನಯ ಚಕ್ರವರ್ತಿಗೆ ನಟ ಚಂದನ್ ಕೂಡ ಸಾಥ್ ನೀಡಿದ್ದಾರೆ.       

short by Pawan / read more at Balkani News

Comments