Skip to main content


ರಾಜಸ್ಥಾನ ರಾಯಲ್ಸ್‌ಗೆ ಒಲಿದ ಜಯ

ಮಳೆ ಕಾಡಿದ ಪಂದ್ಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡ ಬುಧವಾರ ಡೆಲ್ಲಿ ಡೇರ್ ಡೆವಿಲ್ಸ್‌ ತಂಡದ ಎದುರು 10 ರನ್‌ಗಳಿಂದ ಗೆದ್ದಿತು. ಟಾಸ್ ಗೆದ್ದ ಡೆಲ್ಲಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.  ರಾಯಲ್ಸ್‌ ತಂಡ 17.5 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 153 ರನ್‌ ಗಳಿಸಿದ್ದಾಗ ಮಳೆ ಸುರಿಯಿತು. ಮಳೆ ನಿಂತ ನಂತರ ಡೇರ್‌ ಡೆವಿಲ್ಸ್‌ಗೆ ಆರು ಓವರ್‌ಗಳಲ್ಲಿ 71 ರನ್‌ ಗುರಿ ನೀಡಲಾಯಿತು.

ಗ್ಲೆನ್‌ ಮ್ಯಾಕ್ಸ್‌ವೆಲ್‌, ರಿಷಭ್ ಪಂತ್ ಮತ್ತು ಕ್ರಿಸ್ ಮಾರಿಸ್ ತಂಡಕ್ಕೆ ಜಯ ಗಳಿಸಿಕೊಡಲು ಪ್ರಯತ್ನಿಸಿದರು. ಆದರೆ ಜಯದೇವ ಉನದ್ಕತ್ ಮತ್ತು ಲುಂಗ್ಲಿನ್ ಅವರ ದಾಳಿಗೆ ನಲುಗಿದ ತಂಡಕ್ಕೆ 4 ವಿಕೆಟ್ ಕಳೆದುಕೊಂಡು 60 ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು.

Short by Prajwal / read more at Prajavani

Comments