Skip to main content


ದರ್ಶನ್ ಜೊತೆ ಫಿಲ್ಮ್ ಮಾಡಲು ನಾನು ರೆಡಿ: ಸುದೀಪ್

ಕನ್ನಡ ಸಿನಿ ರಂಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಇಬ್ಬರು ನಾಯಕರ ನಡುವೆ ಸ್ಟಾರ್ ವಾರ್ ನಡೆಯುತ್ತಿದೆ ಎನ್ನಲಾಗಿತ್ತು. ಈ ಕುರಿತು ದರ್ಶನ್ ಅಭಿಮಾನಿಯೊಬ್ಬರು ಸುದೀಪ್ ಅವರಿಗೆ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನಲ್ಲಿ ದರ್ಶನ್ ಅವರ ಜೊತೆ ಸಿನಿಮಾ ಮಾಡುತ್ತೀರಾ? ಕನ್ನಡದಲ್ಲಿ ನಿಮ್ಮ ನಡುವೆ ಉತ್ತಮ ಸಂಬಂಧವಿಲ್ಲ ಎಂಬ ಮಾಹಿತಿ ಲಭಿಸಿದೆ. ನಾನು ನಿಮ್ಮಿಬ್ಬರ ಅಭಿಮಾನಿಯಾಗಿದ್ದು, ದರ್ಶನ್ ಅವರೊಂದಿಗೆ ಒಂದು ಸಿನಿಮಾ ಮಾಡುತ್ತೀರಾ ಅಣ್ಣ ಎಂದು ಕೇಳಿದ್ದರು. ಅಭಿಮಾನಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವ ಸುದೀಪ್ ಈ ಟ್ವೀಟ್ ಗೆ ಉತ್ತರಿಸಿದ್ದು, ದರ್ಶನ್ ಹಾಗೂ ನಾನು ಉತ್ತಮ ಸ್ನೇಹಿತರು. ಇಬ್ಬರನ್ನು ಮೆಚ್ಚಿಸುವ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಸುದೀಪ್ ಅವರ ಈ ಟ್ವೀಟ್ ನೊಂದಿಗೆ ಅಭಿಮಾನಿಗಳಲ್ಲಿದ್ದ ಹಲವು ಸಂದೇಹಗಳು ದೂರವಾಗಿದೆ. ಒಂದೊಮ್ಮೆ ಒಳ್ಳೆಯ ಕಥೆಯೊಂದಿಗೆ ದರ್ಶನ್ ಹಾಗೂ ಸುದೀಪ್ ಸ್ಕ್ರೀನ್ ಶೇರ್ ಮಾಡಿದರೆ ಬಾಕ್ಸ್ ಆಫೀಸ್ ಚಿಂದಿಯಾಗಲಿದೆ. ಅದಷ್ಟು ಬೇಗ ಇಬ್ಬರು ತೆರೆ ಮೇಲೆ ಒಂದಾಗಿ ಕಾಣಿಸಿಕೊಳ್ಳಲಿ ಎಂಬುವುದು ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ದಾರೆ.       

short by Pawan / more at Public Tv

Comments