Skip to main content


ಸೀಟಿಗಾಗಿ ಗೋಪಾಲ್ ಭಂಡಾರಿ ಅವರಿಗೆ ಜೀವ ಬೆದರಿಕೆ ನೀಡಿದ್ರಾ ಉದಯಕುಮಾರ್ ಬಣ???

ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಅಕಾಂಕ್ಷಿಯಾಗಿರುವ ’ಮುನಿಯಾಲು ಉದಯಕುಮಾರ್ ಶೆಟ್ಟಿ ಬಣದ ಪ್ರಮುಖರು ಬುಧವಾರ ಬೆಳಿಗ್ಗೆ ಮಾಜಿ ಶಾಸಕ ಹೆಚ್.ಗೋಪಾಲ ಭಂಡಾರಿಯವರ ಮನೆಗೆ ನುಗ್ಗಿ ಜೀವಬೆದರಿಕೆ’ ಎಂಬ ಶೀರ್ಷಿಕೆಯಡಿಯಲ್ಲಿ ವಿವಾದಿತ ವಿಚಾರವೊಂದು ವಾಟ್ಸಪ್‌ನಲ್ಲಿ ಹರಿದಾಡುತ್ತಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮತ್ತಷ್ಟು ಗೊಂದಲಕ್ಕೂ ಕಾರಣವಾಗಿದೆ. ಈ ಕುರಿತು ಮಾಜಿಶಾಸಕ ಹೆಚ್ಗೋ ಪಾಲಭಂಡಾರಿ ಅವರನ್ನು ಪತ್ರಿಕೆ ಮಾತಾಡಿಸಿದಾಗ, ಅಂತಹ ಬೆಳವವಣಿಗಳು ನಡೆಯಲಿಲ್ಲ. ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರಿಗೆ ಸೀಟು ಬಿಟ್ಟು ಕೊಡುವಂತಗೆ ಮನವಿ ಮಾಡಿದ್ದಾರೆ. ಆ ವಿಚಾರ ಪಕ್ಷದ ಹೈಕಮಾಂಡ್‌ಗೆ ಬಿಟ್ಟದಾಗಿದೆ ಎಂದು ಅವರಲ್ಲಿ ತಿಳಿಸಿದ್ದೇನೆ ಎಂದು ಮಾಜಿ ಶಾಸಕರು ತಿಳಿಸಿದ್ದಾರೆ.

short by: Nithin


Comments