Skip to main content


ನಾಯಿ ಕುನ್ನಿಗೆ ಬಿಸ್ಕೆಟ್ ಹಾಕುವ ರೀತಿ ನಡೆಸಿಕೊಂಡ್ರು - ಸಿಎಂ ವಿರುದ್ಧ ರೇವಣಸಿದ್ದಯ್ಯ ಗರಂ!

 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಿನಲ್ಲಿ ಮತ್ತೊಂದು ಮಾಸ್ಟರ್ ಸ್ಟ್ರೋಕ್ ನಡೆದಿದ್ದು, ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡರಾಗಿರುವ ರೇವಣಸಿದ್ದಯ್ಯ ಅವರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ನಿನ್ನೆಯೇ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದೇನೆ ಅಂತ ಹೇಳುವ ಮೂಲಕ ಸಿಎಂ ಮೈಸೂರಿಗೆ ಬರುವ ದಿನವೇ ಶಾಕ್ ನೀಡಿದ್ದಾರೆ. ನಾನು ಸ್ವಂತತ್ರವಾಗಿ ನಿರ್ಧಾರ ತೆಗೆದುಕೊಂಡಿದ್ದೇನೆ. ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೆಗೌಡರನ್ನ ಬೆಂಬಲಿಸುತ್ತೇನೆ. ವರುಣಾದಲ್ಲಿ ಇನ್ನು ನಾಮಪತ್ರಗಳು ಮುಗಿದಿಲ್ಲ. ಹಾಗಾಗಿ ಸಮರ್ಥ ಅಭ್ಯರ್ಥಿ ಬೆಂಬಲಿಸುತ್ತೇನೆ.                

short by NP / more at Public TV

Comments