Skip to main content


ಮನುಕುಲದ ಇತಿಹಾಸದಲ್ಲೇ ಪ್ರಪ್ರಥಮ ಸೂರ್ಯಯಾನ

ಮನುಕುಲದ ಇತಿಹಾಸದಲ್ಲೇ ಮೊದಲ ಬಾರಿಯ ಪ್ರಯೋಗವಾಗಿ ನಾಸಾ ಸೂರ್ಯ ಯಾನ ಮಾಡುತ್ತಿದ್ದು, ಇದಕ್ಕಾಗಿ ಭರದ ಸಿದ್ಧತೆ ನಡೆಸಿದೆ. ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಜುಲೈ ನಲ್ಲಿ ಉಡಾವಣೆಯಾಗುವ ನಿರೀಕ್ಷೆ ಇದ್ದು, ಫ್ಲೋರಿಡಾದಲ್ಲಿರುವ ಕೆನಡಿ ಸ್ಪೇಸ್ ಸೆಂಟರ್ ನಿಂದ ನಭೋ ಮಂಡಲಕ್ಕೆ ಹಾರಲಿದೆ. ಮನುಷ್ಯ ನಿರ್ಮಿಸಿರುವ ಯಾವುದೇ ಬಾಹ್ಯಾಕಾಶ ವಸ್ತುವಿಗಿಂತಲೂ ಸೌರ ಮಂಡಲದ ಪ್ರಭಾವಲಯದ ಹತ್ತಿರದಲ್ಲಿ ಪಾರ್ಕರ್ ಸೋಲಾರ್ ಪ್ರೋಬ್ ಕಾರ್ಯನಿರ್ವಹಿಸಲಿದೆ. ಇದು ಸೂರ್ಯನ ಬಗ್ಗೆ ಆಳವಾದ ಅಧ್ಯಯನ ಮಾಡಲಿದೆ.

short by: Nithin / read more at 60secondsnow

Comments