Skip to main content


ಕನ್ನಡದ ಕೋಟ್ಯಾಧಿಪತಿ ಜವಾಬ್ದಾರಿ ರಮೇಶ್ ಅರವಿಂದ್ ಹೆಗಲಿಗೆ

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಕನ್ನಡದ ಕೋಟ್ಯಾಧಿಪತಿಯ ನಿರೂಪಣೆ ಹೊಣೆಯನ್ನು ಮಾತಿನಲ್ಲೇ ಮೋಡಿ ಮಾಡಬಲ್ಲ, ಕಹಿಯನ್ನೂ ಸಿಹಿಯಾಗಿಯೇ ಹೇಳುವ ಶಕ್ತಿ ಇರುವ, ಮಾತಿನ ಮಲ್ಲ ರಮೇಶ್ ಅರವಿಂದ್ ತನ್ನ ಹೆಗಲಮೇಲೆ ಹೊತ್ತು ಕೊಂಡಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ನಿರೂಪಣೆಯಲ್ಲಿ ಮನೆ ಮನ ಗೆದ್ದಿತ್ತು. ಪ್ರಸ್ತುತ ಕೆಲವು ವರ್ಷಗಳಿಂದ ಈ ಕಾರ್ಯಕ್ರಮ ಪ್ರಸಾರವಾಗಿರಲಿಲ್ಲ. ಇದೀಗ ಮತ್ತೆ ಆ ಕಾರ್ಯಕ್ರಮ ಆರಂಭವಾಗಲಿದ್ದು, ರಮೇಶ್ ಅರವಿಂದ್ ನಿರೂಪಕನ ಸ್ಥಾನವನ್ನು ತುಂಬಲಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಯಶ್ ನಿರೂಪಕರಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಯಶ್ ಜೊತೆ ಮಾತುಕತೆಯೂ ನಡೆದು ಹೋಗಿತ್ತು, ಆದರೆ ಯೋಚಿಸಲು ಸಮಯ ತೆಗೆದುಕೊಂಡ ಯಶ್ ಕಡೆಗೆ ಈ ಕಾರ್ಯಕ್ರಮದ ನಿರೂಪಣೆಗೆ ಒಪ್ಪಿಗೆ ಕೊಟ್ಟಿಲ್ಲ ಎನ್ನಲಾಗಿದೆ.   

short by Pawan / read more at Suvarna News


Comments