Skip to main content


ಪಿಕ್‍ಅಪ್ ವಾಹನ, ಬೈಕ್ ಮುಖಾಮುಖಿ ಡಿಕ್ಕಿ-ಸವಾರ ಸಾವು

ಬೊಲೆರೋ ಪಿಕ್‍ಅಪ್ ವಾಹನ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಒರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರು ಪಟ್ಟಣದ ಬಳಿ ನಡೆದಿದೆ. ಹರೀಶ್ ಪಟೇಲ್ (55) ಎಂಬ ಮೃತ ಬೈಕ್ ಸವಾರ. ಜಾನುವಾರು ತುಂಬಿಕೊಂಡು ಬರುತ್ತಿದ್ದ ಪಿಕ್ ಅಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಹರೀಶ್ ಗಂಭೀರವಾಗಿ ಗಾಯಗೊಂಡಿದ್ದರಿಂದ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.     

short by NP / read more at Public TV

Comments