Skip to main content


ವಯಸ್ಸಿಗೂ ಮೀರಿದ ರಸಿಕತೆಯೊಂದಿಗೆ ಟೈಟಾನಿಕ್ ಹೀರೋ!

ಸಿನಿಮಾದಲ್ಲೂ ಅಲ್ಲದೇ ನಿಜಜೀವನದಲ್ಲೂ ರೋಮ್ಯಾಂಟಿಕ್ ಹೀರೋ ಆಗಿರುವ ಲಿಯೋನಾರ್ಡ್, 43 ವರ್ಷ ಕಳೆದರೂ ಕೂಡ ಬ್ಯಾಚುಲರ್ ಲೈಫ್ ಲೀಡ್ ಮಾಡುತ್ತಿರುವುದು ಗಮನಾರ್ಹ. 1997ರಿಂದ ಸುಮಾರು 12 ಗರ್ಲ್ ಫ್ರೆಂಡ್ಸ್ ಗಳನ್ನು ಮೆಂಟೈನ್ ಮಾಡಿರುವ ಲಿಯೋನಾರ್ಡ್ ಈಗಲೂ ಅಡಾಲೋಸೆಂಟ್ ಏಜ್ಡ್ ಗರ್ಲ್ಸ್ ಜೊತೆ ಡೇಟಿಂಗ್ ಮಾಡುವುದರೊಂದಿಗೆ ತಮ್ಮ ರೊಮ್ಯಾಂಟಿಕ್ ಜೀವನವನ್ನು ಮುಂದುವರೆಸಿದ್ದಾರೆ. ಇತ್ತೀಚಿಗೆ ಬಂದ ಸುದ್ದಿಯ ಪ್ರಕಾರ ಲಿಯೋನಾರ್ಡ್ 23ಹರೆಯದ ಕೆಮೆಲಾ ಅನ್ನೋ ಕ್ಯೂಟ್ ಬೆಡಗಿಯೊಂದಿಗೆ ಸುತ್ತಾಡುತ್ತಿರುವ ವಿಷಯ ವೈರಲ್ ಆಗಿದೆ. ಜೊತೆಗೆ ತನ್ನ ಸಹಜೀವನವನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ ಎನ್ನುವುದು ಅಸಲಿ ವಿಷಯ. ಇಲ್ಲಿ ಆಶ್ಚರ್ಯ ಪಡುವ ಮತ್ತೊಂದು ವಿಷಯವೇನೆಂದರೆ ಲಿಯೋನಾರ್ಡ್ ಡೇಟಿಂಗ್ ಮಾಡುತ್ತಿರುವ ಕೆಮೆಲಾ ಅವರ ತಾಯಿಯ ವಯಸ್ಸು ಲಿಯೋನಾರ್ಡ್ರವರಿಗಿಂತ ಎರಡು ವರ್ಷ ಚಿಕ್ಕವಳು ಎನ್ನುವುದು ಕೇಳುಗರ ಹುಬ್ಬೇರಿಸುವಂತೆ ಮಾಡಿದೆ.  
  
short by Pawan / read more at Balkani News