Skip to main content


ಭಾರಿ ವೈರಲ್ ಆಯ್ತು "ಕೆಜಿಎಫ್" ಚಿತ್ರದ ಈ ಖಡಕ್ ಡೈಲಾಗ್!

ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಕೆಜಿಎಫ್ ಸಿನಿಮಾದ ಡೈಲಾಗ್ ಹೇಳಿದ್ರು. ಆ ಡೈಲಾಗ್ ಸಖತ್ ವೈರಲ್ ಆಗಿತ್ತು. ಈಗ ಹೇಳಿರುವ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸದ್ದು ಮಾಡ್ತಿದೆ. ”ರಕ್ತದ ವಾಸನೆ ಕಂಡು ಬೇಜಾನ್ ಮೀನುಗಳು ಒಟ್ಟಿಗೆ ಬಂದ್ ಬಿಡ್ತವೆ, ಆದರೆ ಮೀನುಗಳಿಗೆ ಗೊತ್ತಿಲ್ಲ. ಆ ರಕ್ತ ಮೀನುಗಳನ್ನು ಬೇಟೆ ಆಡುವ ತಿಮಿಂಗಲದ್ದು ಅಂತ ” ಈ ಮಾಸ್ ಡೈಲಾಗ್ ಕೆಜಿಎಫ್ ಸಿನಿಮಾದಲ್ಲಿದೆ ಎಂದು ಸ್ವತಹ ಯಶ್ ಅವರೇ ಹೇಳಿದ್ದಾರೆ.  ಕೊನೆಯ ಹಂತದ ಚಿತ್ರೀಕರಣದಲ್ಲಿ ಕೆಜಿಎಫ್ ಚಿತ್ರತಂಡ ಬ್ಯುಸಿಯಾಗಿದ್ದು, ರಾಕಿಂಗ್ ಸ್ಟಾರ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.    

Short by Pawan / read more at Kannada News Now

Comments