Skip to main content


ಲಾಲು ಪುತ್ರ ತೇಜ್ ಪ್ರತಾಪ್-ಐಶ್ವರ್ಯ ಮದುವೆ ಮುಹೂರ್ತ ಫಿಕ್ಸ್

ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮೊದಲ ಮಗ ತೇಜ್ ಪ್ರತಾಪ್ ಯಾದವ್ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ. ಮುಂದಿನ ತಿಂಗಳು ತೇಜ್ ಪ್ರತಾಪ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ. ಬಿಹಾರ ಸರ್ಕಾರದಲ್ಲಿ ಸಚಿವರಾಗಿದ್ದ ಚಂದ್ರಿಕಾ ರೈ ಮಗಳನ್ನು ತೇಜ್ ಪ್ರತಾಪ್ ಮದುವೆಯಾಗ್ತಿದ್ದಾರೆ. ತೇಜ್ ಪ್ರತಾಪ್ ಕೈ ಹಿಡಿಯುತ್ತಿರುವ ಐಶ್ವರ್ಯ ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ. ಐಶ್ವರ್ಯ ಅಜ್ಜ ಮಾಜಿ ಸಿಎಂ ಆಗಿದ್ರೆ, ತಂದೆ ಮಾಜಿ ಸಚಿವರು. ಐಶ್ವರ್ಯ ದೆಹಲಿಯಲ್ಲಿ ಉನ್ನತ ಶಿಕ್ಷಣ ಮುಗಿಸಿದ್ದಾರೆ. ಏಪ್ರಿಲ್ 18ರಂದು ಐಶ್ವರ್ಯ-ತೇಜ್ ಪ್ರತಾಪ್ ಯಾದವ್ ಉಂಗುರ ಬದಲಿಸಿಕೊಳ್ಳಲಿದ್ದಾರೆ. ಮೇ 12 ರಂದು ಮದುವೆ ನಡೆಯಲಿದೆ. 

short by Pawan / read more at Kannadadunia

Comments