Skip to main content


ಶರಣ್ ಇದೀಗ ಲೇಡಿಸ್ ಟೈಲರ್ !!!

ಕನ್ನಡ ಚಿತ್ರರಂಗಕ್ಕೆ ‘ಸಿದ್ಲಿಂಗು’, ‘ನೀರ್‌ದೋಸೆ’ ಚಿತ್ರಗಳನ್ನು ನೀಡಿದ ಮೇಲೆ ನಿರ್ದೇಶಕ ವಿಜಯ್ ಪ್ರಕಾಶ್ ನಂತರ ಚಿತ್ರರಂಗದಿಂದ ದೂರವೇ ಉಳಿದುಕೊಂಡಿದ್ದರು. ನಂತರ ‘ಲೇಡೀಸ್ ಟೈಲರ್’ ಚಿತ್ರ ಮಾಡುತ್ತಾರೆ, ಆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿಆರ್ಮುಗಂ ರವಿಶಂಕರ್, ನೀನಾಸಂ ಸತೀಶ್, ಜಗ್ಗೇಶ್, ಹೀಗೆ ಇನ್ಯಾರ್ಯಾರೋ ನಟರಾಗಿ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿಯನ್ನು ಎಂದೋ ಕೇಳಿದ್ದ ಸಿನಿಪ್ರಿಯರು, ಅದನ್ನು ಮರೆತೇ ಹೋಗಿದ್ದರು.ಇದೀಗ ಮತ್ತೆ ‘ಲೇಡೀಸ್ ಟೈಲರ್’ ಅಂಗಡಿ ಓಪನ್ ಆಗಿದ್ದು, ಆದರೆ ರವಿಶಂಕರ್ ಬದಲು ಟೈಲರ್ ಆಗಿ, ಹುಡುಗಿಯರ ಬಟ್ಟೆ ಅಳತೆ ತೆಗೆದುಕೊಳ್ಳಲು ರೆಡಿಯಾಗಿದ್ದಾರೆ ನಟ ಶರಣ್ ಅವರು.ನಟ ಶರಣ್ ಹೇಳಿ ಕೇಳಿ ಸದ್ಯ ಬಹುಬೇಡಿಕೆಯ ನಟ. ಅಲ್ಲದೆ, ಶರಣ್‌ಗೆ ಹಾಸ್ಯಪ್ರಜ್ಞೆಯ ಜತೆಗೆ ಹೀರೋಯಿಸಂ ಕಥೆ ಇರುವ ಚಿತ್ರಗಳು ಪಕ್ಕಾ ಸೂಟ್ ಆಗುತ್ತವೆ. ಇದೆಲ್ಲದರ ಲೆಕ್ಕಾಚಾರ ನೋಡಿಕೊಂಡೇ ನಿರ್ದೇಶನ ವಿಜಯ್, ಶರಣ್ ಕೈಯಲ್ಲಿ ಬಟ್ಟೆ ಅಳತೆಯ ಟೇಪ್ ನೀಡಿದ್ದಾರೆ.

short by: Nithin 


Comments