Skip to main content


ಸಿನಿಮಾದಲ್ಲಿ ಬಳಸಿದ ಬಟ್ಟೆಗಳನ್ನ ಸಿನಿಮಾ ಮುಗಿದ ಮೇಲೆ ಏನ್ ಮಾಡ್ತಾರೆ ಗೊತ್ತೇ?

ಒಂದು ಸಿನಿಮಾದಲ್ಲಿ ನಟ ನಟಿಯರ ಬಟ್ಟೆಗಳಿಗೆ 10 -15 ಲಕ್ಷ ಖರ್ಚಾಗುತ್ತದೆ, ಅವರು ಧರಿಸುವ ಬಟ್ಟೆಗಳೆಲ್ಲ ಬ್ರಾಂಡೆಡ್. ಸ್ಟಾರ್ ಹೀರೊ ಅಥವಾ ಹೀರೋಯಿನ್ ಆದ್ರೆ ಒಬ್ಬರ ಬಟ್ಟೆಗೆ 10 ಲಕ್ಷದ ವರೆಗೆ ಖರ್ಚು, ಹಾಗಾದರೆ ಇಷ್ಟು ದುಬಾರಿ ಬಟ್ಟೆಗಳನ್ನ ಏನು ಮಾಡುತ್ತಾರೆ ನಿರ್ದೇಶಕರು. ಕೆಲವು ನಿರ್ಮಾಪಕರು ಬಟ್ಟೆಗಳನ್ನ ಗೋಡನ್ ನಲ್ಲಿ ಇಡುತ್ತಾರೆ ಕೆಲವರಂತೂ ಸೆಕೆಂಡ್ಸ್ ನಲ್ಲಿ ಮಾರಿಬಿಡುತ್ತಾರೆ, ಕೆಲವೊಮ್ಮೆ 10 ಲಕ್ಷದ ಬಟ್ಟೆ ಸೆಕೆಂಡ್ಸ್ ನಲ್ಲಿ 1 ಲಕ್ಷಕ್ಕೆ ಮಾರಾಟವಾಗುತ್ತದೆ. ಕೆಲವರು ಬಟ್ಟೆಯನ್ನ ಖರೀದಿ ಮಾಡಿ ಆರ್ಟಿಸ್ಟ್ ಗೆ ಬಾಡಿಗೆಗೆ ಕೊಡುತ್ತಾರೆ, ಸಿನಿಮಾ ಸೆಕೆಂಡ್ಸ್ ಬಟ್ಟೆಯನ್ನ ಮಾರುವುದಕ್ಕಾಗಿಯೇ ಮುಂಬೈ ನಲ್ಲಿ ಒಂದು ಮಾರ್ಕೆಟ್ ಇದೆ ಕೆಲವು ನಿರ್ಮಾಪಕರು ಅಲ್ಲಿಗೆ ಹೋಗಿ ಮಾರುತ್ತಾರೆ. ಮತ್ತೆ ಮತ್ತೆ ಸಿನಿಮಾ ತೆಗೆಯುವ ನಿರ್ಮಾಪಕರು ಮಾತ್ರ ಗೋಡನ್ ನಲ್ಲಿ ಇಟ್ಟು ಕ್ಯಾರೆಕ್ಟರ್ ಆರ್ಟಿಸ್ಟ್ ಗೆ ಈ ಬಟ್ಟೆ ಬಳಸುತ್ತಾರೆ. ಕೆಲವೊಮ್ಮೆ ಸಿನಿಮಾ ಶೂಟಿಂಗ್ ವೇಳೆ ನಟ ನಟಿಯರಿಗೆ ಇಷ್ಟವಾದ ಬಟ್ಟೆ ಮತ್ತು ಶೂ ಗಳನ್ನ ಅವರೇ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಹೀಗೆ ಎಲ್ಲಾ ಸ್ಟಾರ್ ಮಾಡುವುದಿಲ್ಲ.        

short by Pawan / more at Balkani News

Comments