Skip to main content


ಏರ್‌ಟೆಲ್‌ನ ಹೊಸ "ಭರ್ಜರಿ" ಆಫರ್: ಉಚಿತವಾಗಿ ವೀಕ್ಷಿಸಿ "ಐಪಿಎಲ್"!!

ಇತ್ತೀಚಿಗಷ್ಟೆ 299 ರೂಪಾಯಿಗಳಿಗೆ ಪ್ರತಿದಿನ ಮೂರು ಜಿಬಿ ಡೇಟಾ ಆಫರ್ ಪ್ರಕಟಿಸಿದ್ದ ಏರ್‌ಟೆಲ್ ಇದೀಗ, ವಿವೊ ಐಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಶುರುವಾಗುವ ಮುನ್ನವೇ ಏರ್‌ಟೆಲ್ ಕಂಪೆನಿ ನೂತನ "ಏರ್‌ಟೆಲ್ ಟಿವಿ" ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಆಫರ್‌ನಲ್ಲಿ ಉಚಿತವಾಗಿ ಅನ್‌ಲಿಮಿಟೆಡ್ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಣೆ ಅವಕಾಶವನ್ನು ನೀಡಿದೆ. ಏರ್‌ಟೆಲ್‌ನ ಎಲ್ಲಾ ಬಳಕೆದಾರರು ಉಚಿತವಾಗಿ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ಐಪಿಎಲ್ ಕ್ರಿಕೆಟ್‌ಗಾಗಿಯೇ ಇರುವ ವಿಭಾಗದಲ್ಲಿ ಎಲ್ಲಾ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು ಎಂದು ಏರ್‌ಟೆಲ್ ತಿಳಿಸಿದೆ..!

short by: Sp / read more at Gizbot

Comments