Skip to main content


ರಾಜಸ್ಥಾನ್ ವಿರುದ್ಧ ಸುಲಭ ಜಯ ದಾಖಲಿಸಿದ ಕೆಕೆಆರ್

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 7 ವಿಕೆಟ್ ಗಳ ಸುಲಭ ಜಯ ದಾಖಲಿಸಿದೆ. ಸವಾಯಿ ಮಾನ್ ಸಿಂಗ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅತಿಥೇಯ ತಂಡ ರಾಜಸ್ಥಾನ್ 20 ಓವರ್ ಗಳಲ್ಲಿ 160/8 ಸ್ಕೋರ್ ಮಾಡಿತ್ತು. ಕೆಕೆಆರ್ ತಂಡವು ಈ ಗುರಿಯನ್ನು 18.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಮುಟ್ಟಿ, ಜಯಭೇರಿ ಬಾರಿಸಿತು. ಈ ಗೆಲುವಿನ ಮೂಲಕ ಐಪಿಎಲ್ 2018ರ ಅಂಕ ಪಟ್ಟಿಯಲ್ಲಿ ಕೆಕೆಆರ್ ತಂಡವು ಅಗ್ರಸ್ಥಾನಕ್ಕೇರಿದೆ.  ಕನ್ನಡಿಗ ರಾಬಿನ್ ಉತ್ತಪ್ಪ 36 ಎಸೆತಗಳಲ್ಲಿ 48ರನ್ ಸಿಡಿಸಿದರು. 6 ಬೌಂಡರಿ, 2 ಸಿಕ್ಸರ್ ಬಾರಿಸಿದರು. ಅಷ್ಟರಲ್ಲಿ ಗೆಲ್ಲುವ ಹಾದಿಯಲ್ಲಿದ್ದ ಕೆಕೆಆರ್ ಗೆ ನಿತೀಶ್ ರಾಣಾ 35ರನ್ ಹಾಗೂ ನಾಯಕ ದಿನೇಶ್ ಕಾರ್ತಿಕ್ 42ರನ್ ಗಳಿಸಿ ಅಜೇಯರಾಗಿ ಉಳಿದು ತಂಡಕ್ಕೆ ಅರ್ಹ ಜಯ ತಂದರು.           

short by Prajwal / read more at OneIndia

Comments