Skip to main content


ಗೆಲುವಿನೊಂದಿಗೆ ಶುಭಾರಂಭ ಮಾಡಿದ CSK

ಡ್ವೇನ್ ಬ್ರಾವೋ ಸಿಡಿಲಬ್ಬರದ ಅರ್ಧಶತಕ ಹಾಗೂ ಕೇದಾರ್ ಜಾದವ್ ಅಜೇಯ(24) ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್'ಕಿಂಗ್ಸ್ ಒಂದು ವಿಕೆಟ್'ಗಳ ರೋಚಕ ಜಯ ಸಾಧಿಸುವುದರೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಮುಂಬೈ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಚೆನ್ನೈ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್'ಗೆ ವಾಟ್ಸನ್-ರಾಯುಡು ಜೋಡಿ 27 ರನ್'ಗಳ ಜತೆಯಾಟವಾಡಿತು.  ಆದರೆ ಒಂದು ಹಂತದಲ್ಲಿ 105 ರನ್'ಗಳಿಗೆ 7 ವಿಕೆಟ್ ಕಳೆದುಕೊಂಡು CSK ಸೋಲಿನತ್ತ ಮುಖಮಾಡಿತ್ತು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ಬ್ರಾವೋ ಕೇವಲ 30 ಎಸೆತಗಳಲ್ಲಿ 7 ಅಮೋಘ ಸಿಕ್ಸರ್ ಹಾಗೂ 3 ಆಕರ್ಷಕ ಬೌಂಡರಿಗಳ ನೆರವಿನಿಂದ ತಂಡವನ್ನು ಗೆಲುವಿನ ಸಮೀಪ ತಂದು ವಿಕೆಟ್ ಒಪ್ಪಿಸಿದರು.       
     
Short by Prajwal / read more at Suvarna news