Skip to main content


5 ವರ್ಷದ ಬಾಲಕಿಯ ಮೇಲೆ ಇಬ್ಬರು ಬಾಲಕರಿಂದ ಅತ್ಯಾಚಾರ ಆರೋಪ

ಐದು ವರ್ಷದ ಬಾಲಕಿಯ ಮೇಲೆ ಇಬ್ಬರು ಬಾಲಕರು ಅತ್ಯಾಚಾರ ಎಸಗಿದ ಘಟನೆ ಒಡಿಶಾದ ಜಗತ್ಸಿಂಗ್‌ಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಈ ಘಟನೆ ನಡೆದಿದ್ದು, ಪೊಲೀಸರು ಬಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. "ಶಾಲೆಯ ಆವರಣದಲ್ಲಿ ನನ್ನ ಪುತ್ರಿಯ ಮೇಲೆ 11 ಹಾಗೂ 14 ವಯಸ್ಸಿನ ಇಬ್ಬರು ಬಾಲಕರು ಅತ್ಯಾಚಾರ ಎಸಗಿದರು" ಎಂದು ಬಾಲಕಿಯ ತಾಯಿ ದಾಖಲಿಸಿದ ಮೊದಲ ಮಾಹಿತಿ ವರದಿಯಲ್ಲಿ ಹೇಳಲಾಗಿದೆ. ಬಾಲಕಿ 1ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಮೃದು ಪಾನೀಯ ನೀಡುವುದಾಗಿ ಬಾಲಕರು ಆಮಿಷ ಒಡ್ಡಿ ಕರೆದೊಯ್ದು ಬಾಲಕಿಯ ಅತ್ಯಾಚಾರ ಎಸಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ‘‘ನಾವು ಆರೋಪಿಗಳು ಹಾಗೂ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಿದ್ದೇವೆ. ವೈದ್ಯಕೀಯ ವರದಿ ಬಂದ ಬಳಿಕ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ’’ ಎಂದು ಜಗತ್ಸಿಂಗ್ ಉಪ ವಿಭಾಗದ ಪೊಲೀಸ್ ಅಧಿಕಾರಿ ಸುಜ್ಯೋಗ್ಯ ಮಿಶ್ರಾ ಹೇಳಿದ್ದಾರೆ.   

short by Pawan / more at Varthabharathi

Comments