ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಒಂದು ಸುಂದರ ನಗರಿ. ಇದಕ್ಕೆ ನಿವೃತ್ತರ ಸ್ವರ್ಗ. ಉದ್ಯಾನ ನಗರಿ, ಸಿಲಿಕಾನ್ ಸಿಟಿ ಎಂಬ ಹೆಸರುಗಳೂ ಇವೆ. ಬೆಂಗಳೂರು ಅಭಿವೃದ್ಧಿ ಹೊಂದುತ್ತಿರುವ ವೇಗದ ಕುರಿತು ಏನೂ ಹೇಳೋ ಅವಶ್ಯಕತೆ ಇಲ್ಲ. ನನ್ನ ಅಭಿಪ್ರಾಯದಲ್ಲಿ ಬೆಂಗಳೂರಿನ ಈಗಿನ ಹಠಾತ್ ರೂಪಾಂತರವು ಆಹಾರದ ದೃಶ್ಯವನ್ನು ಪ್ರಾಯೋಗಿಕವಾಗಿ ಅಭಿವೃದ್ಧಿಪಡಿಸಲು ಅವಕಾಶ ಮಾಡಿಕೊಟ್ಟಿತು. ಬೆಂಗಳೂರಿಗೆ ಬಂದಾಗ ಫೇಮಸ್ ದೋಸೆ ಮತ್ತು ಕೊಡವ ಶೈಲಿಯ ತಿನಿಸುಗಳನ್ನು ತಿನ್ನುವ ಮಾತು ಹಳೆಯದಾಗಿದೆ. ಬೆಂಗಳೂರು ಹಳೆಯ ಮತ್ತು ಹೊಸದೊಂದು ಸ್ಪೂರ್ತಿದಾಯಕ ಮಿಷ್-ಮ್ಯಾಶ್ ಆಗಿದೆ ಮತ್ತು ನೀವು ಕೆಲವು ದಿನಗಳವರೆಗೆ ಮಾತ್ರ ಭೇಟಿ ನೀಡುತ್ತಿದ್ದರೂ ಅಥವಾ ಅಲ್ಲಿಯೇ ವಾಸಿಸುತ್ತಿದ್ದರೂ ಸಹ, ಆಹಾರದ ವಿಷಯದಲ್ಲಿ ಸಾಕಷ್ಟು ಅವಕಾಶಗಳನ್ನು ಹೊಂದಿದೆ. ಬೆಂಗಳೂರಲ್ಲಿ ದೊರಕುವ, ನನಗಿಷ್ಟವಾದ ಟಾಪ್ ೯ ಬೆಸ್ಟ್ ಡಿಶಸ್ ಗಳನ್ನು ಈ ಕೆಳಗೆ ಸಜ್ಜೆಸ್ಟ್ ಮಾಡಿದ್ದೀನಿ, ತಪ್ಪದೇ ಓದಿ..
1) Benne Masala Dosa At CTR (ಮಲ್ಲೇಶ್ವರಂ)
ಈ ಲಿಸ್ಟ್ ನಲ್ಲಿ ಈ ತಿಂಡಿಗೆ No.1 ಸ್ಥಾನ ಯಾಕೆ ಎಂಬ ಪ್ರಶ್ನೆಗೆ ಉತ್ತರ ತಿಳಿಯಲು ನೀವು ಖಂಡಿತ CTR ಗೆ ಭೇಟಿ ನೀಡಿ, ಬೆಣ್ಣೆ ದೋಸೆ ಆರ್ಡರ್ ಮಾಡಲೇ ಬೇಕು. ಇದು ಕೈಯಲ್ಲಿದ್ದಾಗ, ನಾನು ನನ್ನ ಜೀವನದಲ್ಲಿ ತಿನ್ನುತ್ತಿದ್ದ ಅತ್ಯುತ್ತಮ ದೋಸೆ ಎಂಬ ಫೀಲ್ ಕೊಡುತ್ತೆ, ಮತ್ತು ಅನೇಕ ಆಹಾರ ಪ್ರೇಮಿಗಳು ಮತ್ತು ತಜ್ಞರು ಅದನ್ನು ಅನುಭವಿಸಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ. ಇದು ತಮಿಳು ಶೈಲಿಯ ತೆಳುವಾದ ದೋಸೆಯಲ್ಲ, ಪಕ್ಕಾ ಕನ್ನಡಿಗರ ದೋಸೆ. ಈ ನಯವಾದ ದೋಸೆಯನ್ನು ಬಂಗಾರದ ಬಣ್ಣದಂತಿರುವ ಸಾಕಷ್ಟು ಬೆಣ್ಣೆಯೊಂದಿಗೆ ಬೇಯಿಸಲಾಗುತ್ತದೆ. ಅಲ್ಲದೆ, ಇದು ಚಟ್ನಿ ಜೊತೆ ಮಾತ್ರ ಬಡಿಸಲಾಗುತ್ತದೆ. ಆದಷ್ಟು ಬೇಗ ನಿಮ್ಮ ಪ್ರೀತಿ ಪಾತ್ರರೊಂದಿಗೆ ಅಥವಾ ಬಂಧು ಮಿತ್ರರೊಂದಿಗೆ ಹೋಗಿ ನಿಮ್ಮ ಸೀಟುಗಳನ್ನು ಖಾಯ್ದಿರಿಸಿ. ಯಾಕಂದ್ರೆ ಅಲ್ಲಿ ಸೀಟಿಗಾಗಿ ಹರಸಾಹಸನೇ ಪಡಬೇಕು, ಅಷ್ಟೊಂದು ಜನ ಅಲ್ಲಿ ದೋಸೆ ಆರ್ಡರ್ ಮಾಡಿ ವೆಯ್ಟ್ ಮಾಡ್ತಾ ಇರ್ತಾರೆ.
2) Apple Pie At The Only Place
The Only Place ಬೆಂಗಳೂರು ಪಟ್ಟಣದ ಮಧ್ಯಭಾಗದಲ್ಲಿದೆ. ಇಲ್ಲೂ ಯಾವಾಗಲೂ ರಶ್, ಟೇಬಲ್ ಗಾಗಿ ಸಿಕ್ಕಾಪಟ್ಟೆ ವೆಯ್ಟ್ ಮಾಡ್ಬೇಕು. ಪೆಪ್ಪರ್ ಸ್ಟೀಕ್, ಬರ್ಗರ್ಸ್, ಪೈ ಮತ್ತು ಹಾಗೆ, ಪ್ರತಿಯೊಬ್ಬರಿಗೂ ಏನಾದರೂ ಒಂದು ಇಷ್ಟ ಆಗೋವಂತದ್ದು ಖಂಡಿತ ಇರುತ್ತದೆ. ಸ್ನೇಹಿತರ ಗುಂಪಿನೊಂದಿಗೆ ಹೋಗಿ ವಿವಿಧ ವಸ್ತುಗಳನ್ನು ಪ್ರಯತ್ನಿಸಿ. ಬರ್ಗರ್ಸ್ ಮತ್ತು ಆಪಲ್ ಪೈ ಎಂದಿಗೂ ನಿರಾಶಾದಾಯಕವಾಗಿಲ್ಲ.
3) Soft Eggs and Andouille Sausage on Sourdough Toast at Toast & Tonic
ಟೋಸ್ಟ್ & ಟೋನಿಕ್ ಬೆಂಗಳೂರಿಗೆ ಹೊಸಬ. ಯಾಂಗ್ಸ್ಟರ್ ಗಳ ಹಾಟ್ ಫೇವರೆಟ್ ಸ್ಪಾಟ್. ಬಯೋಟಿಫುಲ್ ಸ್ಪಾಟ್, ಕಲರ್ಫುಲ್ ಇಂಟೀರಿಯರ್ಸ್ ಜೊತೆಗೆ ಯೂನಿಕ್ ಡಿಶಸ್ = ಸ್ವರ್ಗಕ್ಕೆ ಮೂರೇ ಗೇಣು! ಇಷ್ಟೂ ಸಾಕಾಗೋದಿಲ್ಲ ಅಂತ ಅಲ್ಲೇ 'ಬಾರ್' ಬೇರೆ ಇದೆ, ಇನ್ನ್ ಕೇಳ್ಬೇಕಾ..!! ಫ್ಲಾಟ್ಬ್ರೆಡ್ಗಳು ಮತ್ತು ಸಾಫ್ಟ್ ಎಗ್ಸ್ ಸೌರ್ಡೊ ಟೋಸ್ಟ್ ಅನ್ನು ಸಂಜೆ ಹೊತ್ತು ಮಿಸ್ ಮಾಡದೆ ಟ್ರೈ ಮಾಡಿ, ಯು ವಿಲ್ ಲವ್ ಇಟ್.
4) Beer and Nachos at Windmills Craftswork
ಸಿಟಿಗಿಂತ ಸ್ವಲ್ಪ ದೂರ ಇದೆ, ಆದರೆ ಒಮ್ಮೆ ನೀವು ಭೇಟಿ ಕೊಟ್ಟಾಗ ಇಷ್ಟು ದೂರ ಬಂದಿದಕ್ಕೂ ಸಾರ್ಥಕ ಎಂಬ ಫೀಲ್ ಕೊಡುತ್ತೆ ಈ ಜಾಗ. ವಿಂಡ್ಮಿಲ್ಗಳು ಜಾಝ್ ಥಿಯೇಟರ್ನಂತೆ ವಿನ್ಯಾಸಗೊಳಿಸಿದ ಒಂದು ಬ್ರೂರಿ ಆಗಿದೆ. ತಿಂಡಿ ಆಸ್ವಾದಿಸುವ ಜೊತೆಗೆ ಪರ್ಫಾರ್ಮೆನ್ಸ್ ನೋಡುವ ಸುವಾರ್ಣಾವಕಾಶ ಈ ಜಾಗ ನಿಮಗೆ ಕಲ್ಪಿಸಲಿದೆ, ಆದ್ದರಿಂದ, ಪರ್ಫೆಕ್ಟ್ ಟೈಂ ನೋಡ್ಕೊಂಡು ಇಲ್ಲಿ ಟೇಬಲ್ ಬುಕ್ ಮಾಡಿ. ನಿಮ್ಮ ಮೇಜಿನ ಮೇಲೆ ಐಪ್ಯಾಡ್ನಲ್ಲಿ ನಿಮ್ಮ ಆರ್ಡರನ್ನು ಇರಿಸಿ ಮತ್ತು ಮಾತ್ತು ಸ್ವಲ್ಪ ಹೊತ್ತು ಕಾಯಿರಿ, ಯಾಕೆಂದ್ರೆ ಇಲ್ಲಿನ ಸರ್ವಿಸ್ ಕೊಂಚ ಸ್ಲೋ. ಇಲ್ಲಿ ಸಿಗೋ ಬಿಯರ್ ಮಾತ್ರ ಅಮೃತ. ಮೆನು ನೋಡ್ಬೇಕಾದ್ರೆ ತಕ್ಷಣ ನಿಮ್ಮ್ ಕಣ್ಣಿಗೆ ಬೀಳೋದು ನಾಚೊಸ್. ಬೇಯಿಸಿದ ಇನ್ಹೌಸ್ ವಿತ್ ಬಿಯರ್ ಇಲ್ಲಿ ದೊರಕುವ ಪರ್ಫೆಕ್ಟ್ ಕ್ಯಾಂಬಿನೇಷನ್. ಟ್ರೈ ಮಾಡಲು ಮಿಸ್ ಮಾಡ್ಬೇಡಿ.
5) Char Siu Bao at the Fatty Bao
ದೆಹಲಿ ಮತ್ತು ಮುಂಬೈ ಮುಂತಾದ ಇತರ ನಗರಗಳಲ್ಲಿ ಸ್ಥಾಪಿತವಾಗಿದ್ದರೂ, ಮೂಲ ಮಾತ್ರ ಬೆಂಗಳೂರು. ಸುಂದರವಾದ ಟೆರೇಸ್ ಬೆಂಗಳೂರಿನ ಹವಾಮಾನಕ್ಕೆ ಸಕ್ಕತ್ತಾಗಿ ಸೂಟ್ ಆಗುತ್ತೆ. ನೀವು ಇಷ್ಟಪಡುವ ಯಾವುದೇ ತಿನಿಸನ್ನು ಮೆನುವಿನಿಂದ ಆರ್ಡರ್ ಮಾಡಿ, ಯಾಕಂದ್ರೆ ಮೆನು ಮಹೋನ್ನತವಾಗಿದೆ. ಅಪ್ಪಿ ತಪ್ಪಿ ನೀವೇನಾದ್ರು ಇಲ್ಲಿಗೆ ಭೇಟಿ ಕೊಟ್ರೆ ಚಾರ್ ಸಿಯು ಬಾವೊ ಪ್ರಯತ್ನಿಸಿ, ಜೀವನದುದ್ದಕ್ಕೂ ನೀವು ಅದನ್ನ ತಿಂದ ಕ್ಷಣನ ಯಾವತ್ತೂ ಮರಿಯೊದಿಲ್ಲ.
6) Seafood at Karavalli
ತಾಜ್ ಗೇಟ್ವೇ ಹೊಟೇಲ್ನಲ್ಲಿರುವ ಸೀ ಫುಡ್ ಸಿಗುವ ರೆಸ್ಟಾರೆಂಟ್, ಎಮ್ಜಿ ರೋಡ್ನಲ್ಲಿದೆ. ಇಲ್ಲಿಗೆ ಬಂದರೆ ಸಮುದ್ರಾಹಾರ-ಪ್ರೇಮಿಯ ಕನಸು ನನಸಾಗುತ್ತದೆ. ಇಲ್ಲಿ ಸಿಕ್ಕಾಪಟ್ಟೆ ವೆರೈಟಿ ಅಪ್ಶನ್ಸ್ ಗಳು ಮೆನುವಿನಲ್ಲಿ ಕಾಣಬಹುದು. ಸೀಗಡಿಗಳು, ಏಡಿ, ಮೀನು, ನಿಮ್ಮ ಸೀ ಫುಡ್ ಆಯ್ಕೆ ಯಾವುದಾದರೂ ಆಗಿರಲಿ, ಬಹುತೇಕ ಎಲ್ಲಾ ರೀತಿಯ ಸೀ ಫುಡ್ ಇಲ್ಲಿ ಸಿಗುತ್ತೆ. ನೀರ್ ದೋಸೆ ಜೊತೆ ಮೀನಿನ ಕರ್ರಿ ಇಲ್ಲಿ ಬೆಸ್ಟ್ ಡಿಶ್ ಅಂತೆ. ಅಂದಹಾಗೆ, 'ಅಂತೆ' ಯಾಕ್ ಅಂದೆ ಅಂದ್ರೆ ನಾನ್ ಪ್ಯೂರ್ ಸಸ್ಯಾಹಾರಿ ಅದಕ್ಕೆ 😜.
7) Mysore Pak
ನಿಜಕ್ಕೂ ಬೆಂಗಳೂರಿನಲ್ಲಿ ಮೈಸೂರ್ ನ ಫೇಮಸ್ ಸ್ವೀಟ್ ಮೈಸೂರ್ ಪಾಕ್ ಅನ್ನು ಸವಿಯುವ ಮಜಾನೆ ಬೇರೆ. ಆದ್ದರಿಂದ ನೀವು ಬೆಂಗಳೂರಿಗೆ ಭೇಟಿ ನೀಡಿದಾಗ ಮೈಸೂರು ಪಾಕ್ ಅನ್ನು ತಪ್ಪದೇ ಟ್ರೈ ಮಾಡಿ. ಅಷ್ಟೇ ಅಲ್ಲದೇ, ಅವುಗಳನ್ನು ಪ್ಯಾಕ್ ಮಾಡ್ಸಿ ಸ್ನೇಹಿತರಿಗೆ ಅಥವಾ ನಿಮ್ಮ ಬಂಧು-ಮಿತ್ರರೊಡನೆ ಹಂಚಿ ತಿನ್ನಿ, ಯಾಕಂದ್ರೆ ಸ್ವೀಟ್ ಗಳನ್ನು ಹಂಚಿ ತಿನ್ನುವ ಸುಖಾನೆ ಬೇರೆ, ಏನಂತೀರಾ? ಆನಂದ್ ಸ್ವೀಟ್ಸ್ ಮತ್ತು ಗುಂಡಪ್ಪ ಸ್ವೀಟ್ಸ್ ಎರಡೂ ಬೆಸ್ಟ್ ಮೈಸೂರ್ ಪಾಕ್ ಅನ್ನು ತಯಾರಿ ಮಾಡುತ್ತವೆ.
8) Coin Paratha with Chicken Ghee Roast at The Permit Room
Permit Room ನಮ್ಮ ಸೆಂಟ್ರಲ್ ಬೆಂಗಳೂರಿಗೆ ಇತ್ತೀಚಿನ ಸೇರ್ಪಡೆಯಾಗಿದ್ದು, ಇದು ಬೆಸ್ಟ್ ಇಂಡಿಯನ್ ಫುಡ್ ಗಳು ದೊರಕುವ ಟಾಪ್ ಸ್ಪಾಟ್ ಅಂತ ಹೇಳಬಹುದು. ಪರಿಚಿತ ಭಕ್ಷ್ಯಗಳಿಗೆ ಒಂದು ಸಹಿ ತಿರುವನ್ನು ಇಲ್ಲಿ ಅನಿರೀಕ್ಷಿತವಾಗಿ ನಿರೀಕ್ಷಿಸಬಹುದು. ಗೀ ರೋಸ್ಟ್ ಚಿಕನ್ ಮತ್ತು ಕಾಯಿನ್ ಪರಾಟಾಸ್ ಟ್ರೈ ಮಾಡಿ, ನಿಮಗೆ ನಿರಾಸೆಯನ್ನುಂಟು ಮಾಡೋ ಮಾತೇ ಇಲ್ಲ. ಇಲ್ಲಿ ಕಾಕ್ಟೇಲ್ಗಳು ದೊರೆಯುತ್ತವೆ ಹಾಗೂ ಅವು ವೆಲ್ ಮಿಕ್ಸಡ್ ಅಂತ ಹೇಳಬಹುದು. ಈ ಸ್ಥಳ ಬೆಂಗಳೂರಿನ ಸೆಂಟರ್ ನಲ್ಲಿ ಇರೋದ್ರಿಂದ ನೀವು ಯಾರನ್ನಾದರೂ ಭೇಟಿ ಮಾಡಲು ಯೋಜಿಸುತ್ತಿದ್ದರೆ, ಇದು ಉತ್ತಮ ಆಯ್ಕೆಯಾಗಿದೆ.
9) Local Meals at Vidhyarthi Bhavan
ಇದು ಹಳೆಯ ಹಾಗೂ ಹಲವು ಬೆಂಗ್ಳೂರಿಗರ ನೆಚ್ಚಿನ ತಾಣ. ಇದು ಸಿಕ್ಕಾಪಟ್ಟೆ ಜನಗಳು ತುಂಬಿರೋ ಸುಂದರ ಸ್ಥಳ. ಇಲ್ಲಿಗೆ ಬರೋವಾಗ ನೀವು ಬೇಜಾರಿನಲ್ಲಿದ್ದರೂ, ಹೋಗವಾಗ ನಿಮ್ಮ ಮುಖದಲ್ಲಿ ಮಂದಹಾಸ ಖಂಡಿತ ಇರುತ್ತೆ. ಇಲ್ಲಿ ನೀವ್ ನಿಮ್ಗೆ ಬೆಕ್ಕದ ಟೇಬಲ್ ಗೋಸ್ಕರ ಕಾಯ್ತಾ ಇದ್ರೆ ದಿನವಿಡೀ ಕಾಯ್ತನೆ ಇರ್ಬೇಕು, ಯಾಕಂದ್ರೆ ಈ ಸ್ಥಳದಲ್ಲಿ ನೀವ್ ಯಾವಾಗ ನೋಡಿದ್ರೂ ಜನಗಳಿಂದ ತುಂಬಿ ತುಳುಕಾಡ್ತಾ ಇರುತ್ತೆ. ಯಾವ ಟೇಬಲ್ ಸಿಗುತ್ತೋ ಆ ಟೇಬಲ್ಗೆ ಹೋಗಿ, ಬೇಗ ಬೇಗ ತಿಂದು ಅಲ್ಲಿಂದ ಆದಷ್ಟು ಬೇಗ ಹಿಂದಿರುಗುವುದು ಉತ್ತಮ. ಮಾಸಲಾ ದೋಸೆ ಜೊತೆಗೆ ಒಂದ್ ಕಪ್ ಕಾಫಿ ಇಲ್ಲಿ ಸಿಗೋ ಬೆಸ್ಟ್ ಮೆನು, ತಪ್ಪದೇ ಟ್ರೈ ಮಾಡಿ.
ಇಷ್ಟೇ ಅಲ್ಲದೆ ಇನ್ನೂ ಹಲವು ಆಯ್ಕೆಗಳನ್ನು ಬೆಂಗಳೂರು ಒದಗಿಸುತ್ತದೆ ಮತ್ತು ಪ್ರಾರಂಭಿಸಲು ಒಳ್ಳೆಯ ಸ್ಥಳವಾಗಿದೆ. ಹಾಗಾಗಿ, ಪ್ರಸಿದ್ಧ ರೆಸ್ಟೋರೆಂಟ್ ಗಳು ಬೆಂಗಳೂರಿನ ಮಾರುಕಟ್ಟೆಯನ್ನು ಇತರ ನಗರಗಳಿಗೆ ಹೋಗುವ ಮುಂಚೆಯೇ ಪ್ರಯತ್ನಿಸುತ್ತಿರುವುದು ಅಚ್ಚರಿಯೇನಲ್ಲ. ಇಲ್ಲಿನ ಹವಾಮಾನವು ಅಲೌಕಿಕವಾಗಿದೆ. ಹಾಗಾಗಿ, ಈ ಅದ್ಭುತವಾದ ಸ್ಥಳಗಳಗೆ ಒಮ್ಮೆಯೂ ಭೇಟಿ ನೀಡದೆ ನೀವು ಹಿಂದುರಿಗಿದರೆ ಅದು ಕ್ಷಮಿಸಲಾಗದ ಅಪರಾಧ.
So, Where are you dining tonight? Comment and let us know.. 😉