Skip to main content


SSLC ಟಾಪರ್ ಆಗಿದ್ದ ಹುಡ್ಗ, ಇಂದು ಸ್ಯಾಂಡಲ್‍ ವುಡ್ ನ ಟಾಪ್ ರೌಡಿ

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಹುಡುಗ ಇಂದು ಸ್ಯಾಂಡಲ್ ವುಡ್ ನ ಟಾಪ್ ಖಳನಟನಾಗಿ ಮಿಂಚುತ್ತಿದ್ದಾರೆ.ಟಗರು ಸಿನಿಮಾದ ಯಶಸ್ವಿನ ಗುಂಗಿನಲ್ಲಿರುವ, ಚಿತ್ರದ ಡಾಲಿ ಪಾತ್ರದ ಮೂಲಕವೇ ಧನಂಜಯ್ ಗುರುತಿಸಿಕೊಳ್ಳುತ್ತಿದ್ದಾರೆ.ಅರಸೀಕೆರೆ ತಾಲೂಕಿನ ಸೆಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಧನಂಜಯ್ ಓದಿದ್ದರು. ಅಂದು ಧನಂಜಯ್ ಎಸ್‍ಎಸ್‍ಎಲ್‍ಸಿ ಬೋರ್ಡ್ ಪರೀಕ್ಷೆಯಲ್ಲಿ 95.32% ಅಂಕಗಳನ್ನು ಪಡೆದುಕೊಂಡು ಟಾಪರ್ ಆಗಿದ್ದರು. ಟಾಪರ್ ಆಗಿದ್ದರಿಂದ ಧನಂಜಯ್ ಅವರ ಫೋಟೋ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಟಗರಿನ ಡಾಲಿ ನಂತರ ದರ್ಶನ್ ಅವರ ಮುಂದಿನ ಚಿತ್ರ ಯಜಮಾನದಲ್ಲಿ ಕೂಡ ಧನಂಜಯ್ ನೆಗೆಟಿವ್ ಪಾತ್ರ ಮಾಡುತ್ತಿದ್ದಾರೆ. ಇದು ಮತ್ತೊಂದು ಕುತೂಹಲಕಾರಿ ಪಾತ್ರವಾಗಿದ್ದು ದರ್ಶನ್ ಅವರ ಜೊತೆ ಮತ್ತೊಮ್ಮೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದೆ.

short by: Nithin