Skip to main content


ಐಪಿಎಲ್ ಉದ್ಘಾಟನೆ ದಿನ ಈ ನಟನ ಡ್ಯಾನ್ಸ್ ಗೆ ಅತಿ ಹೆಚ್ಚು TRP.!

ಐಪಿಎಲ್ 11ನೇ ಆವೃತ್ತಿ ಗ್ರ್ಯಾಂಡ್ ಆಗಿ ಆರಂಭವಾಗಿದೆ. ಮೊದಲ ದಿನದ ಉದ್ಘಾಟನೆಯಲ್ಲಿ ಬಾಲಿವುಡ್ ಸ್ಟಾರ್ ನಟರು ಹೆಜ್ಜೆ ಹಾಕಿದ್ದರು. ವರುಣ್ ಧವನ್, ಜಾಕ್ವೆಲಿನ್ ಫರ್ನಾಂಡಿಸ್, ಪ್ರಭುದೇವ, ತಮನ್ನಾ ಹಾಗೂ ಹೃತಿಕ್ ರೋ‍ಷನ್ ಸೇರಿದಂತೆ ಹಲವರು ಕುಣಿದು ಕುಪ್ಪಳಿಸಿದ್ದರು. ಸುಮಾರು 45 ನಿಮಿಷಗಳ ಕಾಲ ಈ ಕಲಾವಿದರಿಂದ ನಿರಂತರವಾಗಿ ಮನರಂಜನೆ ಕಾರ್ಯಕ್ರಮ ಜರುಗಿತ್ತು. ಈ ಎಲ್ಲ ಸ್ಟಾರ್ ಕಲಾವಿದರು ಪ್ರತ್ಯೇಕವಾಗಿ ಅವರದ್ದೇ ಆದ ಸ್ಟೈಲ್ ನಲ್ಲಿ, ಅವರದ್ದೇ ಆದ ಹಾಡುಗಳಿಗೆ ನೃತ್ಯ ಮಾಡಿದ್ದರು. ಈ ಎಲ್ಲರ ಪೈಕಿ ನಟ ಹೃತಿಕ್ ರೋಷನ್ ಅವರ ಫರ್ಫಾಮೆನ್ಸ್ ಗೆ ಅತಿ ಹೆಚ್ಚು ಟಿ.ಆರ್.ಪಿ ಬಂದಿದೆ ಎಂಬ ಮಾಹಿತಿ ಈಗ ಹೊರಬಿದ್ದಿದೆ.   

short by Pawan / read more at 60secondsnow

Comments