Skip to main content


ನಟಿ ಇಲಿಯಾನ ಗರ್ಭಿಣಿನಾ? ಈ ಬಗ್ಗೆ ಇಲಿಯಾನ ಪ್ರತಿಕ್ರಿಯೆ ಏನು..?

ಇತ್ತೀಚೆಗೆ ನಟಿ ಇಲಿಯಾನ ಅವರು ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಎಲ್ಲಾ ಕಡೆ ಹರಡಿದ್ದು, ಆದರೆ ಈ ಬಗ್ಗೆ ಇದೀಗ ನಟಿ ಇಲಿಯಾನ ಅವರೇ ಕ್ಲಾರಿಟಿ ನೀಡಿದ್ದಾರೆ. ಈ ಹಿಂದೆ ನಟಿ ಇಲಿಯಾನ ಅವರು ಗೆಳೆಯ ಆಂಡ್ಯೂ ನ ಇನ್ಸ್ಟಾ ಗ್ರಾಮ್ ನಲ್ಲಿ 'ಹಬ್ಬಿ' ಅಂತ ಕರೆದ್ಮೇಲೆ, ಇಲಿಯಾನಾ ಹಾಗೂ ಆಂಡ್ರ್ಯೂ ಸೀಕ್ರೆಟ್ ಆಗಿ ಮದುವೆ ಆಗಿದ್ದಾರೆ ಎಂಬ ಸುದ್ದಿ ಬಾಲಿವುಡ್ ನ ಅಂಗಳದಲ್ಲಿ ಕೇಳಿ ಬಂದಿತ್ತು. ನಂತರ ಅವರು ಗರ್ಭಿಣೆಯಾಗಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಇದನ್ನು ಗಮನಿಸಿದ ನಟಿ ಇಲಿಯಾನ ಅವರು ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಒಂದನ್ನ ಪೋಸ್ಟ್ ಮಾಡಿ ''ನಾನು ಗರ್ಭಿಣಿ ಅಲ್ಲ'' ಅಂತ ಬರೆದುಕೊಂಡಿದ್ದಾರೆ. ಈ ಮೂಲಕ ಅವರು ಈ ಗಾಸಿಪ್ ಗೆ ತೆರೆಎಳೆದಿದ್ದಾರೆ.

Courtesy: Webdunia 


Comments