Skip to main content


ಸಿಕ್ಸರ್ ನಲ್ಲೀಗ ಧೋನಿಯೇ ನಂಬರ್ 1…!

ಟೀಂ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ನ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ‌ ಪ್ರಸಕ್ತ ಐಪಿಎಲ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿರುವ ಆಟಗಾರ. ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿರುವ ವೆಸ್ಟ್ ಇಂಡೀಸ್ ನ ದೈತ್ಯ ಬ್ಯಾಟ್ಸಮನ್ ಕ್ರೀಸ್ ಗೇಲ್, ಆರ್ ಸಿಬಿಯ ಬ್ಯಾಟಿಂಗ್ ಶಕ್ತಿ, ದ. ಆಫ್ರಿಕಾದ ಎ ಬಿ ಡಿವಿಲಿಯರ್ಸ್ ಅವರನ್ನು ಹಿಂದಿಕ್ಕಿ ಮಾಹಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿರುವವರ ಸಾಲಿನಲ್ಲಿ ಮೊದಲ‌ ಸ್ಥಾನದಲ್ಲಿದ್ದಾರೆ. ಈವರೆಗಿನ ಅಂಕಿ ಅಂಶಗಳ ಪ್ರಕಾರ ಈ ಸೀಸನ್‌ನಲ್ಲಿ ಮಾಹಿ 9 ಪಂದ್ಯಗಳಿಂದ 24 ಸಿಕ್ಸರ್, ಕ್ರೀಸ್ ಗೇಲ್ 4 ಪಂದ್ಯಗಳಿಂದ 23 ಸಿಕ್ಸರ್, ಎ ಬಿ ಡಿವಿಲಿಯರ್ಸ್ 6 ಪಂದ್ಯಗಳಿಂದ 23, ಆಂಡ್ರೆ ರಸೆಲ್ 9 ಪಂದ್ಯಗಳಿಂದ 21 ಸಿಕ್ಸರ್ ಸಿಡಿಸಿದ್ದಾರೆ.          



Short by Prajwal / more at The New Indian Times

Comments