Skip to main content


10.8 ಲಕ್ಷ ಉದ್ಯೋಗಗಳನ್ನು 1.50 ಕೋಟಿಯೆಂದು ತಿರುಚಿತೇ ಪ್ರಧಾನಿ ಸಲಹಾ ಮಂಡಳಿ?

2017ರಲ್ಲಿ ಭಾರತವು 1.50 ಕೋಟಿ ಉದ್ಯೋಗಗಳನ್ನು ಸೃಷ್ಟಿಸಿದೆಯೆಂದು ಪ್ರತಿಪಾದಿಸುವುದಕ್ಕಾಗಿ ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯ(ಪಿಎಂಇಎಸಿ)ರಾದ ಸುರ್ಜಿತ್ ಭಲ್ಲಾ ಅವರು ರಾಷ್ಟ್ರಮಟ್ಟದ ಉದ್ಯೋಗ ಸಮೀಕ್ಷಾ ವರದಿಯನ್ನು ತಿರುಚಿದ್ದಾರೆ ಹಾಗೂ ಅಪ್ರಾಮಾಣಿವಾಗಿ ಮಂಡಿಸಿದ್ದಾರೆಂದು ಭಾರತೀಯ ಆರ್ಥಿಕತೆ ನಿಗಾ ಕೇಂದ್ರ (ಸಿಎಂಐಇ)ವು ಆಪಾದಿಸಿದೆ.

ಸಿಎಂಐಇ ನಡೆಸಿದ ಭಾರತದ ಅತಿ ದೊಡ್ಡ ಉದ್ಯೋಗ ಸಮೀಕ್ಷೆಯಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಇತ್ತೀಚೆಗೆ ಆಂಗ್ಲ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನದಲ್ಲಿ ಸುರ್ಜಿತ್ ಭಲ್ಲಾ ಅವರು ಸಿಎಂಐಎ ಸಮೀಕ್ಷೆಯ ಅಂಕಿಅಂಶಗಳನ್ನು ಹಾಗೂ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ)ಯ ದತ್ತಾಂಶಗಳನ್ನು ನೀಡಿದ್ದು, 2017ರಲ್ಲಿ ದೇಶದಲ್ಲಿ 1.50 ಕೋಟಿ ಉದ್ಯೋಗಿಗಳು ಸೃಷ್ಟಿಯಾಗಿರುವ ಸಾಧ್ಯತೆಯಿರುವುದಾಗಿ ಹೇಳಿದ್ದರು.          

short by NP / more at Vartha Bharati

Comments