Skip to main content


10 ನೇ ಕ್ಲಾಸ್ ಪಾಸ್ ಆದವರಿಗೆ ಭರ್ಜರಿ ಆಫರ್ ನೀಡಿದೆ ರಕ್ಷಣಾ ಸಚಿವಾಲಯ.. ಎಲ್ಲ ವಿದ್ಯಾರ್ಥಿಗಳಿಗೂ ತಿಳಿಸಿ

ಈಗಾಗಲೇ ಎಸ್ ಎಸ್ ಎಲ್ ಸಿ ಹಾಗು ಪಿಯು ಫಲಿತಾಂಶಗಳು ಹೊರಬಿದ್ದಿದ್ದು ಹಲವಾರು ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಪಾಸ್ ಆಗಿದ್ದು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸುವತ್ತ ಹೆಜ್ಜೆ ಇಡುತ್ತಿದ್ದಾರೆ. ಇನ್ನು ಕೆಲ ವಿದ್ಯಾರ್ಥಿಗಳು ಕಡಿಮೆ ಅಂಕ ತೆಗೆದಿದ್ದರೂ ಹೆದರಬೇಕಾಗಿಲ್ಲ ಮುಂದಿನ ದಿನಗಳು ನಿಮಗಾಗಿಯೇ ಇವೆ. ಇನ್ನು ವಿಷಯಕ್ಕೆ ಬರಬೇಕೆಂದ್ರೆ ರಕ್ಶಣ ಸಚಿವಾಲಯ ಇದೀಗ ಉದ್ಯೋಗಾವಕಾಶ ಸುದ್ದಿಯನ್ನು ಹೊರಹಾಕಿದ್ದು 10th ಪಾಸ್ ಆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ರಕ್ಷಣಾ ಸಚಿವಾಲಯ ಫೈರ್ ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಹೊರಹಾಕಿದ್ದು ಮೇ 19 ಕೊನೆಯ ದಿನಾಂಕವಾಗಿರುತ್ತದೆ. ಇನ್ನು ಪೂರ್ತಿ ವಿವರ ಹೇಳಬೇಕೆಂದರೆ ರಕ್ಷಣಾ ಸಚಿವಾಲಯ ಹೊರಡಿಸಿದ ಈ ಆದೇಶದ ಪ್ರಕಾರ SSLC ಪಾಸ್ ಆದ ಹಾಗು ಅನುಭವ ಹೊಂದಿದ ಅಥವಾ ಇಲ್ಲದ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆ ಖಾಲಿ ಇರುವ ಸ್ಥಳ ಮುಂಬೈ, ಅರ್ಜಿ ಸಲ್ಲಿಸಲು ಇಂದಿನಿಂದಲೂ ಕೂಡ ಸಾಧ್ಯ ಕೊನೆಯ ದಿನಾಂಕ ಮೇ ೧೯. ಫೈರ್‍ಮೆನ್ ಹುದ್ದೆಯನ್ನು ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ, ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.    

short by Pawan / more at Karnataka Today

Comments