Skip to main content


11, 12 ರಂದು ಬಸ್ ಸಿಗೋದು ಕಷ್ಟ

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್‌ಟಿಸಿ) ಸುಮಾರು 4 ಸಾವಿರ ಬಸ್‌ಗಳು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವುದರಿಂದ ಮೇ 11 ಮತ್ತು 12 ರಂದು ಎರಡು ದಿನ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಮೇ 12 ರಂದು ಮತದಾನ ಪ್ರಕ್ರಿಯೆ ನಡೆಯುವುದರಿಂದ ಮೇ 11 ರಂದು ಚುನಾವಣಾ ಸಿಬ್ಬಂದಿ ನಿಗದಿತ ಮತಗಟ್ಟೆಗಳಿಗೆ ತೆರಳುತ್ತಾರೆ. ಅಂತೆಯೆ ಪೊಲೀಸರು ಕೂಡ ತೆರಳಿ ಮೊಕ್ಕಾಂ ಹೂಡುತ್ತಾರೆ. ನಿಗಮದಲ್ಲಿ ಒಟ್ಟು 8800 ಬಸ್‌ಗಳಿದ್ದು, ಈ ಪೈಕಿ 4 ಸಾವಿರ ಬಸ್‌ಗಳು ಚುನಾವಣಾ ಕಾರ್ಯಕ್ಕೆ ನಿಯೋಜನೆ ಗೊಂಡಿರುವುದರಿಂದ ರಾಜ್ಯದ ಬಹುತೇಕ ಮಾರ್ಗಗಳಲ್ಲಿ ಈ ಎರಡೂ ದಿನ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ.    

short by Pawan / more at Suvarna News

Comments