Skip to main content


ಅಮ್ಮ ಐ ಲವ್ ಯೂ ಚಿತ್ರ ಜೂನ್ 15 ರಂದು ತೆರೆಗೆ

ನಟ ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರುವ 'ಅಮ್ಮ ಐ ಲವ್ ಯೂ' ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದೆ. ಯೆಸ್, ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಮೇ 28 ಕ್ಕೆ ನೆರವೇರಲಿದ್ದು. ಜೂನ್ 15 ಕ್ಕೆ ಚಿತ್ರ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ನಟ ದ್ವಾರಕೀಶ್‌ ಅವರು ನಿರ್ಮಾಣ ಮಾಡುತ್ತಿದ್ದು, ಈ ಚಿತ್ರಕ್ಕೆ ಚೈತನ್ಯ ಅವರು ಆಯಕ್ಷನ್ ಕಟ್ ಹೇಳಿದ್ದಾರೆ. ಇದು 'ದ್ವಾರಕೀಶ್ ಚಿತ್ರ' ಬ್ಯಾನರ್‌ನಲ್ಲಿ ರೆಡಿಯಾಗಿರುವ 51ನೇ ಚಿತ್ರವಾಗಿದ್ದು, ಚಿತ್ರದಲ್ಲಿ ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಜೊತೆಯಾಗಿದ್ದಾರೆ.     

short by Pawan!

Comments