Skip to main content


ಮೇ 15ರಂದು ಬಿಜೆಪಿಗೆ ಪೂರ್ಣ ಬಹುಮತ ಖಚಿತ: ಪ್ರಧಾನಿ ಮೋದಿ ವಿಶ್ವಾಸ

ಬಡಜನರನ್ನು ದೋಚಿದವರು ಯಾರೇ ಆಗಿರಲಿ, ಅವರನ್ನೆಲ್ಲ ಶಿಕ್ಷೆಗೆ ಗುರಿಪಡಿಸಿ ಹಣವನ್ನು ದೇಶದ ಅಭಿವೃದ್ಧಿಗೆ ಹಿಂದಿರುಗಿಸುವುದು ನನ್ನ ಜವಾಬ್ದಾರಿ ಅಂತ ಪ್ರಧಾನಿ ಮೋದಿ ಅವರು ಹೇಳಿದರು, ಅವರು ಶನಿವಾರ ಮಂಗಳೂರಿನಲ್ಲಿ ಬಿಜೆಪಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಅವರು ತಮ್ಮ ಭಾಷಣದ ಆರಂಭದಲ್ಲಿ ತುಳುನಾಡಿನ ಕೋಟೆ ಚೆನ್ನಯ್ಯ, ರಾಣಿ  ಅಬ್ಬಕ್ಕ, ನಾರಾಯಣ ಗುರು, ಕಾರ್ನಾಡ್ ಸದಾಶಿವರಾಯರನ್ನು ನೆನಪಿಸಿಕೊಂಡರು. ಇದೇ ವೇಳೆ ಅವರು ಮಾತನಾಡಿ ಮೇ 15ರಂದು ಬಿಜೆಪಿಗೆ ಪೂರ್ಣ ಬಹುಮತ ಖಚಿತ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಅವರು ಮಾತನಾಡಿ ಕಾಂಗ್ರೆಸ್‌ ತನ್ನ ದುರಹಂಕಾರದಿಂದಲೇ ಎಲ್ಲ ರಾಜ್ಯಗಳನ್ನು ಕಳೆದುಕೊಂಡಿದೆ. ಅಂತಹ ನಡವಳಿಕೆಗಳನ್ನು ಜನ ಒಪ್ಪುವುದಿಲ್ಲ. ಕಾಂಗ್ರೆಸ್‌ ಅನ್ನು ಕರ್ನಾಟಕದ ಜನತೆ ತಿರಸ್ಕರಿಸುವುದು ನಿಶ್ಚಿತ ಎಂದರು. ಇದೇ ವೇಳೆ ಅವರು ನಾನು ಹಿಂದೂಸ್ಥಾನಕ್ಕಾಗಿ ದುಡಿಯುತ್ತೇನೆಯೇ ಹೊರತು ಸ್ವಂತಕ್ಕಾಗಿ ಅಲ್ಲ ಅಂತ ಹೇಳಿದರು.               

short by NP / more at Kannada News Now

Comments