Skip to main content


16 ದಿನಗಳ ಬಳಿಕ ಪೆಟ್ರೋಲ್‌, ಡೀಸಿಲ್‌ ಬೆಲೆ ಇಳಿದದ್ದು ಕೇವಲ 1 ಪೈಸೆ!!

ನಿರಂತರ ಹದಿನಾರು ದಿನಗಳಿಂದ ಏರುತ್ತಾ ಬಂದಿರುವ ಪೆಟ್ರೋಲ್‌ ಮತ್ತು ಡೀಸಿಲ್‌ ದರಗಳು ಇಂದು ಕೊನೆಗೂ ಇಳಿದಿವೆ - ಆದರೆ ಕೇವಲ 1 ಪೈಸೆಯಷ್ಟು ! ನಾಲ್ಕು ಮೆಟ್ರೋಪಾಲಿಟನ್‌ ನಗರಗಳಾಗಿರುವ ದಿಲ್ಲಿ, ಕೋಲ್ಕತ, ಮುಂಬಯಿ ಮತ್ತು ಚೆನ್ನೈನಲ್ಲಿ ಪೆಟ್ರೋಲ್‌ ದರ ಲೀಟರಿಗೆ ಅನುಕ್ರಮವಾಗಿ 78.42, 81.05, 86.25 ಮತ್ತು 81.42 ರೂ ಇರುವುದಾಗಿ ಐಓಸಿ ಅಧಿಕೃತವಾಗಿ ಹೇಳಿದೆ. ಹಾಗೆಯೇ ದಿಲ್ಲಿ, ಕೋಲ್ಕತ, ಮುಂಬಯಿ ಮತ್ತು ಚೆನ್ನೈನಲ್ಲಿ ಡೀಸಿಲ್‌ ಲೀಟರ್‌ ದರ ಅನುಕ್ರಮವಾಗಿ 69.30, 71.85, 73.78 ಮತ್ತು 73.17 ರೂ. ಇರುವುದಾಗಿ ಅದು ತಿಳಿಸಿತು.

short by Shraman Jain / more at Udayavani 

Comments