Skip to main content


ಕಾಂಗ್ರೆಸ್ ನಿಂದ 17, ಜೆಡಿಎಸ್ ನಿಂದ 9 ಹೆಸರು ಅಂತಿಮ?

ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಸಚಿವರಾಗಲಿರುವವರ ಪಟ್ಟಿ ಎರಡೂ ಪಕ್ಷಗಳಲ್ಲಿ ಬಹುತೇಕ ಅಂತಿಮಗೊಂಡಿದೆ ಎಂದು ತಿಳಿದುಬಂದಿದೆ. ಈಗಾಗಲೇ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿರುವ ಪರಮೇಶ್ವರ್ ಸಹಿತ 17 ಮಂದಿಗೆ ಸಚಿವ ಸ್ಥಾನ ಈಗ ನೀಡಿ 4 ರಿಂದ 5 ಸ್ಥಾನ ಖಾಲಿ ಇಟ್ಟುಕೊಂಡು ಸ್ಥಾನ ಸಿಗದ ಅತೃಪ್ತರನ್ನು ಸಮಾಧಾನ ಪಡಿಸುವುದು ಎಂದು ಕಾಂಗ್ರೆಸ್ ನಲ್ಲಿ ಬಹುತೇಕ ತೀರ್ಮಾನವಾಗಿದೆ. ಕಾಂಗ್ರೆಸ್ ನಿಂದ ಡಿಕೆಶಿ, ಜಾರ್ಜ್, ಎಚ್.ಕೆ. ಪಾಟೀಲ್ ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳೆ ಮಂತ್ರಿಗಳಾಗುವುದು ಖಚಿತವಾಗಿದ್ದು ಉಳಿದ ಹೆಸರುಗಳ ಬಗ್ಗೆ ಇನ್ನೂ ಪಕ್ಷದ ನಿರ್ಧಾರ ಏನು ಎಂಬುದು ಸ್ಪಷ್ಟವಾಗಿಲ್ಲ. ಜೆಡಿಎಸ್ ತನಗೆ ಸಿಗುವ 11 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಭರ್ತಿ ಮಾಡಿ 2 ಸ್ಥಾನಗಳನ್ನು  ಬಾಕಿ ಇಟ್ಟುಕೊಳ್ಳಲು ನಿರ್ಧರಿಸಿದೆ ಎಂದು ಹೇಳಲಾಗಿದೆ.

short by Shraman Jain / more at Vartha Bharathi

Comments