Skip to main content


2 ದಿನ ರಾಹುಲ್‌ ರಾಜ್ಯ ಪ್ರವಾಸ

ರಾಜ್ಯ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಬಿಡುವಿಲ್ಲದೆ ತೊಡಗಿಸಿಕೊಳ್ಳುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮೇ 3 ಮತ್ತು 4 ರಂದು ಹೈದರಾಬಾದ್‌ ಮತ್ತು ಮುಂಬೈ ಕರ್ನಾಟಕ ಭಾಗದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಮೇ 3 ರಂದು ದೆಹಲಿಯಿಂದ ನೇರವಾಗಿ ಬೀದರ್‌ಗೆ ಆಗಮಿಸಲಿರುವ ರಾಹುಲ್‌ ಗಾಂಧಿ, ಔರಾದ್‌, ಭಾಲ್ಕಿ, ಹುಮನಾಬಾದ್‌ ಹಾಗೂ ಬೀದರ್‌ನಲ್ಲಿ ರೋಡ್‌ ಶೋ ನಡೆಸಲಿದ್ದಾರೆ.        

short by NP / more at Publicvibe

Comments