Skip to main content


ಕೆನಡಾ ಟ್ವೆಂಟಿ-20 ಲೀಗ್ ಮೂಲಕ ಕ್ರಿಕೆಟ್‌ಗೆ ಸ್ಮಿತ್ ವಾಪಸ್

ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ನಿಷೇಧ ಎದುರಿಸುತ್ತಿರುವ ಆಸ್ಟ್ರೇಲಿಯದ ಮಾಜಿ ಕ್ರಿಕೆಟ್ ತಂಡದ ನಾಯಕ ಸ್ಟೀವನ್ ಸ್ಮಿತ್ ಕ್ರಿಕೆಟ್‌ಗೆ ವಾಪಸಾಗಲು ಸಜ್ಜಾಗುತ್ತಿದ್ದಾರೆ. ಸ್ಮಿತ್ ಜೂ.28 ರಿಂದ ಆರಂಭವಾಗಲಿರುವ ಚೊಚ್ಚಲ ಆವೃತ್ತಿಯ ಜಾಗತಿಕ ಕೆನಡಾ ಟ್ವೆಂಟಿ-20 ಲೀಗ್‌ಗೆ ಆಯ್ಕೆಯಾಗಿದ್ದಾರೆ. ಸ್ಮಿತ್ ಅವರು ಇತರ ಅಂತರ್‌ರಾಷ್ಟ್ರೀಯ ಸ್ಟಾರ್‌ಗಳಾದ ಕ್ರಿಸ್ ಗೇಲ್, ಆ್ಯಂಡ್ರೆ ರಸ್ಸೆಲ್ ಹಾಗೂ ಶಾಹಿದ್ ಅಫ್ರಿದಿಯೊಂದಿಗೆ ಲೀಗ್‌ನಲ್ಲಿ ಆಡಲಿದ್ದಾರೆ. ಆರು ತಂಡಗಳು ಭಾಗವಹಿಸಲಿರುವ ಟೂರ್ನಮೆಂಟ್ ಜೂ.28ಕ್ಕೆ ಆರಂಭವಾಗಲಿದೆ ಎಂದು ಲೀಗ್ ಆಯೋಜಕರು ತಿಳಿಸಿದ್ದಾರೆ.  

short by Pawan / more at Varthabharathi

Comments