Skip to main content


2018ರಲ್ಲಿ ಶೇ.7.4 GDP: ಭಾರತ ವಿಶ್ವದ ಅತೀ ವೇಗದ ಅರ್ಥಿಕತೆ

2018ರಲ್ಲಿ ಭಾರತವು ವಿಶ್ವದ ಅತ್ಯಂತ ವೇಗದಲ್ಲಿ ಬೆಳೆಯುವ ಪ್ರಮುಖ ಆರ್ಥಿಕತೆ ಎನಿಸಿಕೊಳ್ಳಲಿದೆ ಎಂಬ ಭವಿಷ್ಯವಾಣಿಯನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ - ಐಎಂಎಫ್ - ಪುನರುಚ್ಚರಿಸಿದೆ. ಅಂತೆಯೇ ಭಾರತ 2018ರಲ್ಲಿ ಶೇ.7.4 ಜಿಡಿಪಿಯನ್ನು ಮತ್ತು 2019ರಲ್ಲಿ ಶೇ.7.8ರ ಜಿಡಿಪಿಯನ್ನು ದಾಖಲಿಸಲಿದೆ ಎಂದು ಐಎಂಎಫ್ ದೃಢತೆಯಿಂದ ಹೇಳಿದೆ. ಭಾರತವು ನೋಟು ಅಮಾನ್ಯದ ಪ್ರತಿಕೂಲ ಪರಿಣಾಮಗಳಿಂದ ಈಗ ಚೇತರಿಸಿಕೊಂಡಿದೆ; ಹಾಗೆಯೇ ಜಿಎಸ್‌ಟಿ ಅನುಷ್ಠಾನದ ಬಾಲಗ್ರಹ ಪೀಡೆಯಿಂದಲೂ ಅದು ಮುಕ್ತವಾಗುತ್ತಿದೆ. ಭಾರತದ ಅತ್ಯಂತ ಸದೃಢ ಖಾಸಗಿ ಬಳಕೆದಾರಿಕೆಯ ಬಲದಲ್ಲಿ ದೇಶವು ನೋಟು ಅಮಾನ್ಯ ಮತ್ತು ಜಿಎಸ್‌ಟಿ ಬಾಲಗ್ರಹ ಪೀಡೆಯಿಂದ ಹೊರಬರಲು ಸಾಧ್ಯವಾಗಿದೆ ಎಂದು ಐಎಂಎಫ್ ವರದಿ ಹೇಳಿದೆ. ಆದರೂ ಐಎಂಎಫ್ ಭಾರತಕ್ಕೆ ಒಂದು ಎಚ್ಚರಿಕೆ ನೀಡಿದೆ: ಹಣದುಬ್ಬರ ಒತ್ತಡ ಹೆಚ್ಚುತ್ತಿರುವ ಕಾರಣ ಆರ್‌ಬಿಐ ತನ್ನ ಹಣಕಾಸು ನೀತಿಯನ್ನು ಬಿಗಿಯಾಗಿ ಇರಿಸಿಕೊಳ್ಳುವ ಅಗತ್ಯವಿದೆ ಎಂದು ಐಎಂಎಫ್ ಹೇಳಿದೆ.     

short by Pawan / more at Udayavani

Comments