Skip to main content


ಐಪಿಎಲ್ 2018: ಪ್ರಶಸ್ತಿ ವಿಜೇತ ತಂಡಕ್ಕೆ ಸಿಗುವ ಬಹುಮಾನದ ಮೊತ್ತ ಎಷ್ಟು ಗೊತ್ತಾ?

ಟೂರ್ನಿಗೆ ಅಪಾರ ಪ್ರೇಕ್ಷಕರ ಬೆಂಬಲ ಹಾಗೂ ಕೋಟ್ಯಂತರ ಟಿವಿ ವೀಕ್ಷಕರ ಮೂಲಕ ಭಾರಿ ಪ್ರಮಾಣದ ಆದಾಯವೇ ಬಂದಿದೆ. ಇದಲ್ಲದೆ ಜಾಹಿರಾತುಗಳ ಮೂಲಕವೂ ಬಿಸಿಸಿಐ ಕೋಟ್ಯಂತರ ಹಣ ಬಾಚಿದೆ. ಹಾಗಾದರೆ ಪ್ರಶಸ್ತಿ ಗೆದ್ದ ತಂಡಕ್ಕೆ ಸಿಗುವ ಬಹುಮಾನದ ಮೊತ್ತ ಎಷ್ಟು ಗೊತ್ತಾ...? ಐಪಿಎಲ್ 2018 ಪೈನಲ್ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ಬರೊಬ್ಬರಿ 20 ಕೋಟಿ ರೂ. ನಗದು ಬಹುಮಾನ ಕೂಡ ದೊರೆಯಲಿದೆ. ಆಯೋಜಕರು ಪ್ರಶಸ್ತಿ ವಿಜೇತ ತಂಡದ ನಾಯಕನಿಗೆ 20 ಕೋಟಿ ರೂ. ಚೆಕ್ ವಿತರಿಸಲಿದ್ದಾರೆ. ಅಂತೆಯೇ ರನ್ನರ್ ಅಪ್ ತಂಡಕ್ಕೆ 12.5 ಕೋಟಿ ರೂ. ದೊರೆಯಲಿದೆ.

ಈ ಎರಡು ವಿಭಾಗ ಮಾತ್ರವಲ್ಲದೆ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೂ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಈ ಪೈಕಿ ಟೂರ್ನಿಯ ಅಮೂಲ್ಯ ಆಟಗಾರ ಪ್ರಶಸ್ತಿ ಪಡೆವ ಆಟಗಾರನಿಗೆ 10 ಲಕ್ಷ ರೂ. ನಗದು, ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಗೆ ಪರ್ಪಲ್ ಕ್ಯಾಪ್ ಗೌರವದೊಂದಿಗೆ 10 ಲಕ್ಷ ಚೆಕ್ ಮತ್ತು ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ಗೌರವದೊಂದಿಗೆ 10 ಲಕ್ಷ ಚೆಕ್ ದೊರೆಯಲಿದೆ.   

short by Pawan / more at Kannada Prabha

Comments