Skip to main content


2019 ರ ಐಪಿಎಲ್ ಗೆ ಎಬಿ ಡಿವಿಲಿಯರ್ಸ್ ಕಮ್ ಬ್ಯಾಕ್?

2019ರ ಐಪಿಎಲ್ ಟೂರ್ನಿಗೆ ದಕ್ಷಿಣ ಆಫ್ರಿಕಾ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ಕಾಮ್ ಬ್ಯಾಕ್ ಮಾಡುವಂತೆ ಆರ್ ಸಿಬಿ ಟ್ವೀಟ್ ಮಾಡಿದೆ. ಎಬಿಡಿ ಅವರ ನಿವೃತ್ತಿಯ ಶಾಕಿಂಗ್ ಸುದ್ದಿ ತಿಳಿದ ಬಳಿಕ ಹಲವು ಅಭಿಮಾನಿಗಳು ನಿರಾಸೆ ಅನುಭವಿಸಿದ್ದರು. ಈ ಕುರಿತು ಟ್ವೀಟ್ ಮಾಡಿರುವ ಆರ್ ಸಿಬಿ, ಅಪಾರ ಅಭಿಮಾನಿ ಬಳಗವನ್ನು ಗಳಿಸಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿರುವ ಎಬಿ ಡಿವಿಲಿಯರ್ಸ್ ಬೆಂಗಳೂರಿಗೆ ಕಾಮ್ ಬ್ಯಾಕ್ ಮಾಡಿ ಎಂದು ಬರೆದುಕೊಂಡಿದೆ. ಎಬಿಡಿ ನಿವೃತ್ತಿ ಘೋಷಿಸುವ ಮುನ್ನ 2018ರ ಐಪಿಎಲ್ ಟೂರ್ನಿಯಲ್ಲಿ ತಂಡ ತೋರಿದ್ದ ನೀರಸ ಪ್ರದರ್ಶನಕ್ಕೆ ಕ್ಷಮೆ ಕೋರಿದ್ದರು. ಈ ಕುರಿತು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ ಕ್ಷಮೆ ಕೋರಿ ಮುಂದಿನ ಐಪಿಎಲ್ ಗೆ ಮತ್ತಷ್ಟು ತಯಾರಿ ನಡೆಸಿ ಕಮ್ ಬ್ಯಾಕ್ ಮಾಡುವುದಾಗಿ ತಿಳಿಸಿದ್ದರು. ನಿವೃತ್ತಿ ಘೋಷಣೆ ಬಳಿಕವೂ ಐಪಿಎಲ್ ನಲ್ಲಿ ಭಾಗವಹಿಸುವ ಸಾಧ್ಯತೆಗಳಿದ್ದು, ಆದರೆ ಎಬಿಡಿ ಕುರಿತು ಸ್ಪಷ್ಟ ನಿರ್ಧಾರವನ್ನು ತಿಳಿಸಿಲ್ಲ.     

short by Pawan / more at Public Tv

Comments