Skip to main content


2019ರಲ್ಲೂ ಮೋದಿ ಸರ್ಕಾರ : ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ

ರಾಷ್ಟ್ರ ರಾಜಕಾರಣದ ವಿದ್ಯಮಾನದ ಬದಲಾವಣೆಗೆ ಕಾರಣವಾದ ಕರ್ನಾಟಕದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ನಂತರ ಮುಂಬರುವ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇಂದು ನಾಲ್ಕನೆ ವರ್ಷಾಚರಣೆ. ಇದೇ ಸಂದರ್ಭದಲ್ಲಿ "2019ರಲ್ಲೂ ಮೋದಿ ಸರ್ಕಾರ " ಎಂಬ ಘೋಷಣೆಯೊಂದಿಗೆ ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಮರೋಪಾದಿಯಲ್ಲಿ ಸಿದ್ಧತೆಯಲ್ಲಿ ತೊಡಗಿದೆ.

ನಾಲ್ಕು ವರ್ಷಗಳಲ್ಲಿ ಮೋದಿ ಸರ್ಕಾರದ ಸಾಧನೆ ಮತ್ತು ಜನಪ್ರಿಯ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಲೋಕಸಭೆ ಚುನಾವಣೆ ಪ್ರಚಾರದ ಥೀಮ್ (ಘೋಷವಾಕ್ಯವನ್ನು) ಸಹ ಅನಾವರಣಗೊಳಿಸಲಾಗಿದೆ. ವರ್ಷಾಚರಣೆ ಸಡಗರ, ಸಂಭ್ರಮಕ್ಕಾಗಿ ಸಾಥ್ ನಿಯತ್ ಸಹಿ ವಿಕಾಸ್( ಪರಿಶುದ್ಧ ಧ್ಯೇಯ ಸಮರ್ಪಕ ಅಭಿವೃದ್ಧಿ) ಎಂಬ ಅಡಿ ಬರಹವನ್ನೂ ಸಹ ಈ ಘೋಷವಾಕ್ಯಕ್ಕೆ ಬಳಸಲಾಗುತ್ತಿದೆ.

short by Pawan / more at Eesanje

Comments