Skip to main content


2019ರ ವಿಶ್ವಕಪ್ ಟೂರ್ನಿಗೆ ಭಾರತದ ಮಧ್ಯಮ ಕ್ರಮಾಂಕ ಹೇಗಿದೆ ಗೊತ್ತಾ?

2019ರ ವಿಶ್ವಕಪ್ ಟೂರ್ನಿಗೆ ತಯಾರಿಗಳು ಆರಂಭಗೊಂಡಿದೆ. ಈ ಬಾರಿಯೂ ಕೂಡ ಭಾರತ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲಿದೆ.

3ನೇ ಕ್ರಮಾಂಕ: ವಿರಾಟ್ ಕೊಹ್ಲಿ 
ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ನಾಯಕ ವಿರಾಟ್ ಕೊಹ್ಲಿಗಿಂತ ಉತ್ತಮ ಆಯ್ಕೆ ಬೇರೆ ಇಲ್ಲ. 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿರುವ ವಿರಾಟ್ ಕೊಹ್ಲಿ ಈಗಾಗಲೇ ಟೀಮ್‌ಇಂಡಿಯಾವನ್ನ ನಂಬರ್.1 ತಂಡವನ್ನಾಗಿ ಮಾಡಿದ್ದಾರೆ.

4ನೇ ಕ್ರಮಾಂಕ: ಕೆಎಲ್ ರಾಹುಲ್ 
ಟೀಮ್‌ಇಂಡಿಯಾದ ಪ್ರತಿಭಾನ್ವಿತ ಆಟಗಾರನಾಗಿ ಗುರುತಿಸಿಕೊಂಡಿರುವ ಕನ್ನಡಿಗ ಕೆಎಲ್ ರಾಹುಲ್, ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯೋ ಸಾಧ್ಯತೆ ಇದೆ. ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆರಂಭಿಕನಾಗಿ ಕಣಕ್ಕಿಳಿದ ರಾಹುಲ್, ಅದ್ಬುತ ಪ್ರದರ್ಶನ ನೀಡಿದ್ದರು. ಹೀಗಾಗಿ ರಾಹುಲ್ ಆರಂಭಿಕನಾಗಿ ಕಣಕ್ಕಿಳಿದರೆ, ನಾಲ್ಕನೇ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದಾರೆ.

5ನೇ ಕ್ರಮಾಂಕ: ಎಮ್ ಎಸ್ ಧೋನಿ 
3ನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಐಪಿಎಲ್ ಚಾಂಪಿಯನ್ ಮಾಡಿಸಿದ ಎಮ್ ಎಸ್ ಧೋನಿ, ಟೀಮ್‌ಇಂಡಿಯಾದ ಬೆನ್ನೆಲುಬು. ಅದರಲ್ಲೂ 2019ರ ವಿಶ್ವಕಪ್ ಟೂರ್ನಿಯಲ್ಲಿ ಧೋನಿಯೇ ಕಿಂಗ್ ಮೇಕರ್. ಇತ್ತೀಚೆಗೆ ಮುಕ್ತಾಯವಾದ ಐಪಿಎಲ್ ಟೂರ್ನಿಯಲ್ಲಿ ಧೋನಿ 75.83 ಸರಾಸರಿಯಲ್ಲಿ 455 ರನ್ ಸಿಡಿಸಿದ್ದಾರೆ. ಧೋನಿ ಸ್ಟ್ರೈಕ್ ರೇಟ್ 150. ಟೀಮ್‌ಇಂಡಿಯಾ ಪರ ಧೋನಿ 5ನೇ ಕ್ರಮಾಂಕದಲ್ಲಿ ಹೆಚ್ಚು ಯಶಸ್ಸು ಕಂಡಿದ್ದಾರೆ. 

6ನೇ ಕ್ರಮಾಂಕ : ದಿನೇಶ್ ಕಾರ್ತಿಕ್ 
ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ಮಿಂಚಿದ ದಿನೇಶ್ ಕಾರ್ತಿಕ್ ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. 

7ನೇ ಕ್ರಮಾಂಕ : ಹಾರ್ದಿಕ್ ಪಾಂಡ್ಯ 
ಟೀಮ್‌ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದಾರೆ. ಬ್ಯಾಟಂಗ್‌ನಲ್ಲಿ 260 ರನ್ ಸಿಡಿಸಿದರೆ, 18 ವಿಕೆಟ್ ಪಡೆದು ಗಮನಸೆಳೆದಿದ್ದಾರೆ.      

short by Pawan / more at Suvarna News

Comments