Skip to main content


20 ವರ್ಷಗಳ ದಾಂಪತ್ಯಕ್ಕೆ ವಿದಾಯ ಹೇಳಿದ ಬಾಲಿವುಡ್ ನ ಈ ಖ್ಯಾತ ನಟ!

ಬಾಲಿವುಡ್ ನಟ ಅರ್ಜುನ್ ರಾಮ್‌‌ಪಾಲ್ ಹಾಗೂ ಪತ್ನಿ ಮೆಹ್ರ ಜೆಸಿಯಾ ತಮ್ಮ 20 ವರ್ಷಗಳ ವೈವಾಹಿಕ ಜೀವನದಿಂದ ವಿಚ್ಛೇದನ ಪಡೆದುಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಹೌದು, ತಮ್ಮ ದಾಂಪತ್ಯ ಜೀವನದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅರ್ಜುನ್ ರಾಮ್‌‌ಪಾಲ್ ‘ ನಾನು ಕಳೆದ 20 ವರ್ಷಗಳಿಂದ ನಮ್ಮಿಬ್ಬರ ವೈವಾಹಿಕ ಜೀವನದಲ್ಲಿ ಸುಖ, ನೆಮ್ಮದಿ, ಎಲ್ಲ ರೀತಿಯ ಸಂತವನ್ನು ಅನುಭವಿಸಿದ್ದೇವೆ… ಇದುವರೆಗೂ ಒಟ್ಟಿಗೆ ಜೀವನ ನಡೆಸಿರುವ ನಾವು ಇನ್ನು ಮುಂದೆ ಬೇರೆ ದಾರಿಯಲ್ಲಿ ನಡೆಯಲಿದ್ದೇವೆ. ನಾವು ದೂರ ಆದ ಮೇಲೂ ಕೂಡ ನಮ್ಮ ನಡುವಿನ ಪ್ರೀತಿ, ಗೌರವ ಈಗಲೂ ಹಾಗೇ  ಉಳಿದುಕೊಳ್ಳಲಿದೆ. ನಾವು ನಮ್ಮ ಸಂಬಂಧದಿಂದ ದೂರಾಗಬಹುದು, ಆದರೆ ಪ್ರೀತಿ ಯಾವಾಗಲೂ ಶಾಶ್ವತವಾಗಿ ಇರುತ್ತದೆ’ ಅಂತ ಹೇಳಿದ್ದಾರೆ.  

short by Pawan / more at Kannada News Now

Comments