Skip to main content


22 ವರ್ಷಗಳ ಬಳಿಕ ಈ ಗ್ರಾಮದಲ್ಲಿ ನಡೆಯುತ್ತಿದೆ ಮದುವೆ!

ನಮ್ಮ ಧೋಲಪುರ ಜಿಲ್ಲೆಯ ರಾಜಘಾಟ್ ಗ್ರಾಮದಲ್ಲಿ ಬರೋಬ್ಬರಿ 22 ವರ್ಷಗಳ ಕಾಯುವಿಕೆಯ ಬಳಿಕ ಕಳೆದ ವಾರ ಮದುವೆಯ ದಿಬ್ಬಣವೊಂದು ಹೊರಟಿದ್ದು ಗ್ರಾಮಸ್ಥರಲ್ಲಿ ಭಾರೀ ಸಂಭ್ರಮವನ್ನೇ ಮೂಡಿಸಿದೆ. ಮೆರವಣಿಗೆಯಲ್ಲಿ ಸವಾರಿಗಾಗಿ ಕುದುರೆಯನ್ನು ವ್ಯವಸ್ಥೆ ಮಾಡಿಕೊಳ್ಳಲು ಮದುಮಗ ಪವನ್‌ಗೆ ಸಾಧ್ಯವಾಗಿರದಿದ್ದರೂ ಆತನ ಮುಖದಲ್ಲಿ ಮನೆಮಾಡಿದ್ದ ಸಂತಸಕ್ಕೆ ಪಾರವೇ ಇರಲಿಲ್ಲ. 1996ರ ಬಳಿಕ ಮೊದಲ ಬಾರಿಗೆ ಮದುವಣಗಿತ್ತಿಯನ್ನು ತಮ್ಮೂರಿಗೆ ಬರಮಾಡಿಕೊಂಡಿರುವ ಗ್ರಾಮಸ್ಥರೂ ತುಂಬ ಸಂಭ್ರಮದಲ್ಲಿದ್ದಾರೆ. ಜಿಲ್ಲಾ ಕೇಂದ್ರಕ್ಕೆ ಸಮೀಪವೇ ಇದ್ದರೂ ರಾಜಘಾಟ್ ಅಕ್ಷರಶಃ ಕುಗ್ರಾಮವಾಗಿದೆ. ಇಲ್ಲಿ ವಿದ್ಯುತ್ತಿಲ್ಲ,ರಸ್ತೆ ಸಂಪರ್ಕವಿಲ್ಲ,ಕುಡಿಯುವ ನೀರೂ ಇಲ್ಲ. ಗ್ರಾಮದ ಯುವಕರ ಮದುವೆ ಪ್ರಸ್ತಾಪಗಳೆಲ್ಲ ಹೆಣ್ಣುಗಳ ಕಡೆಯವರಿಂದ ತಿರಸ್ಕೃತಗೊಂಡಿದ್ದರಿಂದ ಕಳೆದ 22 ವರ್ಷಗಳಿಂದ ಅವರಿಗೆ ಮದುವೆಯ ಭಾಗ್ಯ ಒಲಿಯದೇ ಅವಿವಾಹಿತರಾಗಿಯೇ ಉಳಿದುಬಿಟ್ಟಿದ್ದಾರೆ. ಈ ಗ್ರಾಮದಲ್ಲಿ ಯಾವುದೇ ಮೂಲಸೌಕರ್ಯಗಳಿಲ್ಲ,ಹೀಗಾಗಿ ಇಲ್ಲಿ ಯಾವುದೇ ಮದುವೆ ನಡೆಯುವುದಿಲ್ಲ. 22 ವರ್ಷಗಳ ನಂತರ ಗ್ರಾಮಸ್ಥರು ಮದುವೆ ನೋಡುತ್ತಿದ್ದಾರೆ ಎಂದು ವರನ ಸಂಬಂಧಿಯೋರ್ವರು ಹೇಳಿದರು. ಕಡು ಬಡತನದಲ್ಲಿ ಬೇಯುತ್ತಿರುವ ಈ ಗ್ರಾಮದ ಜನಸಂಖ್ಯೆ 300 ಆಗಿದ್ದು,40 ಕಚ್ಚಾ ಮನೆಗಳಿವೆ.    

short by Pawan / more at Varthabharathi

Comments