Skip to main content


ಪೆಟ್ರೋಲ್ ದರ ಲೀಟರ್‌ಗೆ 25 ರೂ ಇಳಿಸಲು ಸಾಧ್ಯ: ಚಿದಂಬರಂ

ಪೆಟ್ರೋಲ್ ದರವನ್ನು ಲೀಟರ್‌ಗೆ 25 ರೂ.ನಷ್ಟು ತಗ್ಗಿಸಲು ಅವಕಾಶವಿದೆ. ಆದರೆ, ಕೇಂದ್ರ ಸರ್ಕಾರವು ಲೀಟರ್‌ಗೆ ಕೇವಲ ಒಂದೆರಡು ರೂಪಾಯಿಯಷ್ಟು ಮಾತ್ರ ಇಳಿಕೆ ಮಾಡಿ ಜನರನ್ನು ವಂಚಿಸುತ್ತಿದೆ ಎಂದು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಬುಧವಾರ ಆರೋಪಿಸಿದ್ದಾರೆ. ಕಚ್ಚಾತೈಲದ ಬೆಲೆಯಲ್ಲಿ ಇಳಿಕೆಯಾಗಿದೆ. ಇದರ ಪ್ರಮಾಣಕ್ಕೆ ಅನುಗುಣವಾಗಿ ಪೆಟ್ರೋಲ್ ದರವನ್ನು ಲೇಟರ್‌ಗೆ 15 ರೂ.ನಷ್ಟು ಇಳಿಕೆ ಮಾಡಲು ಸಾಧ್ಯವಿದೆ. ಅಲ್ಲದೆ ಪೆಟ್ರೋಲ್ ಮೇಲಿನ 10 ರೂ. ಹೆಚ್ಚುವರಿ ತೆರಿಗೆಯನ್ನು ಸಹ ಕೇಂದ್ರ ಸರ್ಕಾರ ಕಡಿತ ಮಾಡಬಹುದು. ಇದರಿಂದ ಒಟ್ಟಾರೆ ಪೆಟ್ರೋಲ್ ದರವನ್ನು 25 ರೂ ನಷ್ಟು ತಗ್ಗಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ. ಜಾಗತಿಕ ಕಚ್ಚಾ ತೈಲದ ಮೇಲಿನ ದರ ಹೆಚ್ಚಳ ಮತ್ತು ಇರಾನ್ ಮೇಲಿನ ಅಮೆರಿಕದ ನಿರ್ಬಂಧದ ಪರಿಣಾಮ ತೈಲ ದರ ಏರಿಕೆ ಅನಿವಾರ್ಯವಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶಿವ ಪ್ರತಾಪ್ ಶುಕ್ಲಾ ಮಂಗಳವಾರ ತಿಳಿಸಿದ್ದರು. ಬೆಲೆ ಇಳಿಕೆ ಮಾಡಲು ಸರ್ಕಾರ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.    

short by Pawan / more at Oneindia

Comments