Skip to main content


285 ರೈತರಿಂದ ದಯಾಮರಣಕ್ಕೆ ಅರ್ಜಿ

ಸರ್ಕಾರಗಳ ನಿರ್ಲಕ್ಷ್ಯ ಧೋರಣೆಗೆ ಬೇಸತ್ತು ರಾಷ್ಟ್ರಪತಿಗಳಿಗೆ ಮೊರೆ ಹೋಗಲು ದೆಹಲಿ ಚಲೋ ನಡೆಸಿದ ಮಹದಾಯಿ ಹೋರಾಟಗಾರರು,  ಮಹದಾಯಿ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಿ ನೀರು ದೊರಕಿಸಿಕೊಡಬೇಕು. ಇಲ್ಲವಾದರೆ ದಯಾಮರಣಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಮನವಿ ಸಲ್ಲಿಸಿ ತಿಂಗಳ ಗಡುವು ನೀಡಿದ್ದಾರೆ. ಏ.25ರಂದು ಹುಬ್ಬಳ್ಳಿಯಿಂದ ರೈಲ್ವೆಯಲ್ಲಿ ತೆರಳಿದ ಸುಮಾರು 285ಕ್ಕೂ ಹೆಚ್ಚು ಮಹದಾಯಿ ಹೋರಾಟಗಾರರು ರೈತ ಸೇನಾ ರಾಜ್ಯಾಧ್ಯಕ್ಷವೀರೇಶ ಸೊಬರದಮಠ ನೇತೃತ್ವದಲ್ಲಿ ಏ.28ರಿಂದ ಮೂರು ದಿನಗಳ ಕಾಲ ದೆಹಲಿ ಸಂಸತ್‌ ಭವನದ ಎದುರು ಧರಣಿ ನಡೆಸಿದರು.            

short by Pawan / more at Udayavani

Comments