Skip to main content


ಐಸಿಸಿ ಏಕದಿನ ರ್ಯಾಂಕಿಂಗ್: 2ನೇ ಸ್ಥಾನಕ್ಕೆ ಜಾರಿದ ಭಾರತ

ಇಂಗ್ಲೆಂಡ್ ಕ್ರಿಕೆಟ್ ತಂಡ 2013ರ ಜನವರಿಯ ಬಳಿಕ ಮೊದಲ ಬಾರಿ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರಿದೆ. ಐಸಿಸಿ ಬಿಡುಗಡೆ ಮಾಡಿರುವ ಏಕದಿನ ತಂಡಗಳ ರ್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದ್ದ ಭಾರತ ಎರಡನೇ ಸ್ಥಾನಕ್ಕೆ ಜಾರಿದೆ. ಇಯಾನ್ ಮೊರ್ಗನ್ ನೇತೃತ್ವದ ಇಂಗ್ಲೆಂಡ್ ತಂಡ 2015ರ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಸುಧಾರಣೆ ಕಂಡಿದ್ದು, 8 ಅಂಕವನ್ನು ಗಳಿಸಿ 125 ರೇಟಿಂಗ್ ಪಾಯಿಂಟ್ ಪಡೆದಿದೆ. ಒಂದು ಅಂಕ ಕಳೆದುಕೊಂಡಿರುವ ಭಾರತ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕ ಮೂರನೇ ಸ್ಥಾನ(113), ನ್ಯೂಝಿಲೆಂಡ್(112), ಆಸ್ಟ್ರೇಲಿಯ(104) ಹಾಗೂ ಪಾಕಿಸ್ತಾನ(102) ಆ ಬಳಿಕದ ಸ್ಥಾನದಲ್ಲಿವೆ. ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಸ್ಥಾನ ಉಳಿಸಿಕೊಂಡಿದೆ. ದಕ್ಷಿಣ ಆಫ್ರಿಕಗಿಂತ 13 ಅಂಕ ಮುನ್ನಡೆಯಲ್ಲಿದೆ.            

Short by Prajwal / more at varthabharathi

Comments