Skip to main content


ಮೇ 3 ರಿಂದ ಮತದಾನದ ಚೀಟಿ ವಿತರಣೆ

ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 91,13,095 ಮತದಾರರಿದ್ದು, ಮೇ 3ರಿಂದ ಮತದಾನದ ಚೀಟಿ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ. ಸೋಮವಾರ ನಗರದ ಐಪಿಸಿ ತರಬೇತಿ ಕೇಂದ್ರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುನಾಥ ಪ್ರಸಾದ್, ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ್ದ ಸಂದರ್ಭದಲ್ಲಿ 46,04,190 ಪುರುಷರು, 41,92,706 ಮಹಿಳೆಯರು, 1,439 ಇತರರು ಸೇರಿ ಒಟ್ಟು 87,98,335 ಮತದಾರರಿದ್ದರು. ಜ.23ರಿಂದ ಎ.14ರವರೆಗೆ ನಡೆದ ನಿರಂತರ ಪರಿಷ್ಕರಣೆ ವೇಳೆ ಒಟ್ಟು 4,39,226 ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ.          

short by NP / more at Vartha Bharati

Comments