Skip to main content


ಮೇ 30, 31: ಬ್ಯಾಂಕ್‌ ಮುಷ್ಕರ

ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ. ಹೀಗಾಗಿ ಈ ಎರಡು ದಿನ ಬ್ಯಾಂಕ್‌ ವ್ಯವಹಾರಗಳು ಸಂಪೂರ್ಣ ಬಂದ್‌ ಆಗಿರಲಿವೆ.  ಭಾರತೀಯ ಬ್ಯಾಂಕ್ಸ್‌ ಅಸೋಸಿಯೇಶನ್‌ (ಐಬಿಎ) ಮೇ 5ರಂದು ನಡೆಸಿದ ಸಭೆಯಲ್ಲಿ ಕೇವಲ ಶೇ.2ರಷ್ಟು ವೇತನ ಪರಿಷ್ಕರಣೆ ಮಾಡುವುದಾಗಿ ತಿಳಿಸಿತ್ತು. ಇದನ್ನು ವಿರೋಧಿಸಿ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 48 ಗಂಟೆಗಳ ಮುಷ್ಕರಕ್ಕೆ ನೌಕರರ ಒಕ್ಕೂಟ ನಿರ್ಧರಿಸಿದೆ.           

short by Pawan!

Comments