Skip to main content


ಮುಂಜಾನೆ 3:30ರವರೆಗೂ ವಿಚಾರಣೆ ನಡೆಸಿದ ನ್ಯಾಯಾಧೀಶ

ಬಾಂಬೆ ಹೈಕೋರ್ಟ್‌ನ ಬೇಸಿಗೆ ಬಿಡುವಿನ ಮುಂಚಿನ ಕೊನೆಯ ಕೆಲಸದ ದಿನವಾದ ಶುಕ್ರವಾರ ಹೆಚ್ಚಿನ ನ್ಯಾಯಾಧೀಶರುಗಳು, ವಿಚಾರಣೆ ಬಾಕಿಯುಳಿದಿರುವ ಪ್ರಕರಣಗಳ ಆಲಿಕೆಯನ್ನು ಮುಕ್ತಾಯಗೊಳಿಸುವ ಧಾವಂತ ದಲ್ಲಿದ್ದರೆ, ಓರ್ವ ನ್ಯಾಯಾಧೀಶ ಮಾತ್ರ ಮುಂಜಾನೆ 3:30ರವೆಗೂ ತುರ್ತು ಮಧ್ಯಂತರ ಪರಿಹಾರಗಳನ್ನು ಕೋರುವ ಪ್ರಕರಣಗಳ ವಿಚಾರಣೆಯನ್ನು ನಡೆಸುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ನ್ಯಾಯಮೂರ್ತಿ ಶಾರುಖ್ ಜೆ.ಕಾಥಾವಾಲಾ ಅವರು ಶನಿವಾರ ಮುಂಜಾನೆ 3:30ರವರೆಗೂ ಕಿಕ್ಕಿರಿದು ತುಂಬಿದ ನ್ಯಾಯಾಲಯದ ಕೊಠಡಿಯಲ್ಲಿ ಅರ್ಜಿದಾರರ ವಾದ ಪ್ರತಿವಾದಗಳನ್ನು ಆಲಿಸಿದರಲ್ಲದೆ, ಆದೇಶಗಳನ್ನು ಜಾರಿಗೊಳಿಸಿದರು.  ‘‘ನ್ಯಾಯಾಧೀಶ ಕಾಥಾವಾಲಾ ಅವರು ಮುಂಜಾನೆ 3:30 ತಾಸಿನವರೆಗೂ ಬೆಳಗ್ಗೆ ಇದ್ದಂತೆ ತಾಜಾತನದೊಂದಿಗೆ ಕಂಗೊಳಿಸುತ್ತಿದ್ದರು. ನನ್ನ ಪ್ರಕರಣವು ಕೊನೆಗೆ ವಿಚಾರಣೆಗೆ ಬಂದಿತ್ತು. ನ್ಯಾಯಾಧೀಶರು ನಮ್ಮ ವಾದಗಳನ್ನು ತಾಳ್ಮೆಯಿಂದ ಅಲಿಸಿದರು ಹಾಗೂ ಆದೇಶವನ್ನು ಜಾರಿಗೊಳಿಸಿದರು’’ ಎಂದು ಹಿರಿಯ ನ್ಯಾಯವಾದಿ ಪ್ರವೀಣ್ ಸಾಮ್‌ದಾನಿ ಹೇಳಿದ್ದಾರೆ.             

short by Prajwal / more at Varthabharathi

Comments