Skip to main content


ಟೆಲಿಕಾಂನಲ್ಲಿ 40 ಲಕ್ಷ ಕೆಲಸ

ಕುಸಿಯುತ್ತಿರುವ ಟೆಲಿಕಾಂ ವಲಯಕ್ಕೆ ಚೇತರಿಕೆ ನೀಡಲು ತರಂಗಾಂತರ ಶುಲ್ಕಗಳ ಬದಲಾವಣೆ, ಮನೆಗಳಿಗೆ 50 ಎಂಬಿಪಿಎಸ್‌ ವೇಗದ ಬ್ರಾಡ್‌ಬ್ಯಾಂಡ್‌ ಸಂಪರ್ಕ ಹಾಗೂ 2022ರ ವೇಳೆಗೆ 40 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ನಿರೀಕ್ಷೆಯನ್ನು ಹೊಸ ಟೆಲಿಕಾಂ ನೀತಿ ಪ್ರಸ್ತಾಪಿಸಿದೆ. ರಾಷ್ಟ್ರೀಯ ಡಿಜಿಟಲ್‌ ಸಂವಹನಗಳ ನೀತಿ 2018 ಎಂಬ ಹೆಸರಿನ ಈ ಕರಡು ನೀತಿಯನ್ನು ಕೇಂದ್ರ ಸರ್ಕಾರ  ಬುಧವಾರ ಬಿಡುಗಡೆ ಮಾಡಿದೆ.      

short by NP / more at Udayavani

Comments