Skip to main content


ನಾ ಪೇರು ಸೂರ್ಯ: ಮೊದಲ ದಿನವೇ 40 ಕೋಟಿ

ಅಲ್ಲು ಅರ್ಜುನ್ ಹೀರೋ ಆಗಿರುವ ತಾಜಾ ಚಿತ್ರ ನಾ ಪೇರು ಸೂರ್ಯ ನಾ ಇಲ್ಲು ಇಂಡಿಯಾ. ಈ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಸೈನಿಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದೆ. ಇದು ಅಲ್ಲು ಅರ್ಜುನ್ ಕೆರಿಯರ್‌ ನಲ್ಲೇ ಬಿಗ್ಗೆಸ್ಟ್ ಓಪನಿಂಗ್ ಪಡೆದಿರುವ ಸಿನಿಮಾ. ನಾ ಪೇರು ಸೂರ್ಯ ನಾ ಇಲ್ಲು ಇಂಡಿಯಾ ಸಿನಿಮಾ ಮೊದಲ ದಿನವೇ 40 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಅಲ್ಲು ಅರ್ಜುನ್ ಕೆರಿಯರ್‌ ನಲ್ಲಿ ಮೊದಲ ದಿನ ಅತ್ಯಧಿಕ ಕಲೆಕ್ಷನ್ ಮಾಡುವ ಮೂಲಕ ಈ ಸಿನಿಮಾ ದಾಖಲೆ ಸೃಷ್ಟಿಸಿದೆ.    

short by NP / more at Balcony News

Comments