Skip to main content


ಮೋದಿ ಸರಕಾರ 4 ವರ್ಷ : ಜನರಿಗೆ ಮೋದಿ ಸರಕಾರ ಈಗಲೂ ಅಚ್ಚುಮೆಚ್ಚು

ವ್ಯಾಪಕ ನಿರೀಕ್ಷೆ ಮೂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಶನಿವಾರಕ್ಕೆ 4 ವರ್ಷಗಳನ್ನು ಪೂರೈಸಲಿದೆ. ಹಿಂದಿನ ಸರಕಾರಗಳಿಗೆ ಹೋಲಿಸಿದರೆ, ಅತಿ ಹೆಚ್ಚು ಚರ್ಚೆಗೊಳಪಟ್ಟ, ಜನಪ್ರಿಯತೆ ಕಾಯ್ದುಕೊಂಡ ಸರಕಾರಗಳಲ್ಲಿ ಮುಂಚೂಣಿಯಲ್ಲಿದೆ. 2014 ರಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ ಅಧಿಕಾರ ಚುಕ್ಕಾಣಿಯನ್ನು ಹಿಡಿದಿತ್ತು. ನೀತಿ ರೂಪಣೆಯಲ್ಲಿ ಅತ್ಯಂತ ಪ್ರಬಲ, ಖಡಕ್ ಎಂಬ ಕಾರಣಕ್ಕೆ ಹೆಸರು ಮಾಡಿದೆ. ಹಿಂದಿನ ಯುಪಿಎ -2 ಸರಕಾರ ಈ ವಿಷಯದಲ್ಲಿ ದುರ್ಬಲ ಇದ್ದ ಕಾರಣದಿಂದ ಈ ಸರಕಾರಕ್ಕೆ ಜನಪ್ರಿಯತೆ ತಂದುಕೊಟ್ಟಿದೆ. ಇತ್ತೀಚೆಗೆ ಲೋಕಲ್ ಸರ್ಕಲ್ ಹೆಸರಿನ ಸಂಸ್ಥೆ ಈ ಕುರಿತಂತೆ ಸರ್ವೇಯೊಂದನ್ನು ನಡೆಸಿದ್ದು, ಜನಪ್ರಿಯತೆಯ ಮಟ್ಟ 4ನೇ ವರ್ಷದಲ್ಲಿ ಶೇ.57ರಷ್ಟಿದೆ ಎಂದಿದೆ. ಹೆಚ್ಚಿನ ಜನರು ಮೋದಿ ಸರಕಾರದ ಮೇಲೆ ಪ್ರೀತಿ ಹೊಂದಿರುವುದು ವಿಶ್ವಾದ್ಯಂತ ಭಾರತದ ವರ್ಚಸ್ಸನ್ನು ಹೆಚ್ಚಿಸಿದ್ದಕ್ಕಾಗಿ. ಇದರೊಂದಿಗೆ ಭಯೋತ್ಪಾದನೆ ವಿರುದ್ಧ ಹೋರಾಟ, ಪಾಕಿಸ್ಥಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡುತ್ತಿರುವುದು ಮತ್ತು ಮೂಲಸೌಕರ್ಯ ವೃದ್ಧಿ, ತೆರಿಗೆ ಕಿರಿಕಿರಿಗಳನ್ನು ತಪ್ಪಿಸಿದ್ದಕ್ಕಾಗಿ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ.     

short by Pawan / more at Udayavani

Comments